ಕರ್ನಾಟಕ

karnataka

ETV Bharat / bharat

ಹಬ್ಬಕ್ಕೂ ಮುನ್ನ ಕಂದನನ್ನು ಕಳಕೊಂಡು ಶೋಕಸಾಗರದಲ್ಲಿ ಮುಳುಗಿದ ಕುಟುಂಬ

ಆ ಮಗುವಿನ ಆಯಸ್ಸು ಬರೇ ಮೂರು. ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಶೋಕದಲ್ಲಿ ಆ ಕುಟುಂಬ ಮುಳುಗಿದೆ. ಈ ಘಟನೆ ತೆಲಂಗಾಣ ಜಿಲ್ಲೆಯ ಆದಿಲಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

ಮೂರು ವರ್ಷಕ್ಕೇ ತುಂಬಿದ ನೂರು ವರ್ಷ

By

Published : Oct 27, 2019, 2:58 PM IST

ಆದಿಲಾಬಾದ್​:ಹಬ್ಬಕ್ಕೆಂದು ಕುಟುಂಬ ಸಹಿತ ಸ್ವಗ್ರಾಮಕ್ಕೆ ತೆರಳಿದ ಆ ಕುಟುಂಬದಲ್ಲೀಗ ನೀರವ ಮೌನ ಆವರಿಸಿದೆ. ಮಗನನ್ನು ಕಳೆದುಕೊಂಡ ಆ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಕಿನ ಹಬ್ಬಕ್ಕೆ ತೆರಳಿದ ಮನೆಯಲ್ಲೀಗ ಬರೇ ಕತ್ತಲು.

ಹೌದು, ಉಟ್ನೂರ್​ ತಾಲೂಕು ಕೇಂದ್ರದಲ್ಲಿ ವಿಜಯ್ ಆಟೋ ನಡೆಸಿಕೊಂಡ ಜೀವನ ಸಾಗಿಸುತ್ತಿದ್ದಾರೆ. ದೀಪಾವಳಿಗೆಂದು ತಾಯಿ, ಹೆಂಡ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಿಜಯ್​ ಸ್ವಗ್ರಾಮವಾದ ಗಂಗಾಪೂರ್​ಗೆ ತೆರಳಿದರು.

ಹಬ್ಬದ ಹಿನ್ನೆಲೆ ಮನೆ ಶುಚಿಗೊಳಿಸುವ ಕೆಲಸದಲ್ಲಿ ಕುಟುಂಬಸ್ಥರೆಲ್ಲರೂ ಮಗ್ನರಾಗಿದ್ದರು. ವಿಜಯ್​ ಅವರ ಮೂರು ವರ್ಷದ ಮಗಳು ನವೀನಾ ಆಟವಾಡುತ್ತಾ ಮಾಯಾವಾಗಿದ್ದಾಳೆ. ಮಗು ಬಗ್ಗೆ ಗಮನ ಹರಿಸಿದ ಕುಟುಂಬಸ್ಥರು​ ಹುಡುಕಲು ಪ್ರಾರಂಭಿಸಿದ್ದರು.

ನವೀನಾ ಎಲ್ಲೂ ಕಾಣದಿದ್ದಾಗ ಮನೆ ಬಳಿಯ ಹೊಂಡದಲ್ಲಿ ನೋಡಿದಾಗ ಮಗುವಿನ ದೇಹ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ನೀರಿನಿಂದ ಹೊರ ತೆಗೆದು ನೋಡಿದಾಗ ನವೀನಾ ಸಾವನ್ನಪ್ಪಿದ್ದಳು. ಹಬ್ಬದ ಮುನ್ನವೇ ಮಗಳು ಸಾವನ್ನಪ್ಪಿರುವುದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details