ಕೋಲ್ಕತಾ:ಇದೇನ್ ಬಿಸಿಲು, ಹಾಳಾದ್ ಹಗಲೊತ್ತಿನಲ್ಲಿ ಹೊರಗೆ ಹೋಗೋಕಾಗಲ್ಲ, ಕಾಲಿಡೋಕಾಗಲ್ಲ ಅಂತಾ ಜನ ಗೊಣಗಾಡ್ತಾರೆ. ಈಗ ಅಷ್ಟೊಂದು ಪ್ರಖರ ಬಿಸಿಲಿನ ತಾಪವಿದೆ. ಆದರೆ, ದುಡಿಯೋ ವರ್ಗ ಬಿಸಿಲು ಎಂದು ಮನೆಯಲ್ಲಿ ಕೂತ್ರೇ ಹೊಟ್ಟೆ ತುಂಬೋದಿಲ್ವಲ್ಲ. ಅದಕ್ಕಾಗಿ ಕೋಲ್ಕತಾದಲ್ಲೊಬ್ಬ ಆಟೋ ಡ್ರೈವರ್ ಸೂರ್ಯನಿಗೇ ಸವಾಲೊಡ್ಡುತ್ತಿದ್ದಾರೆ.
ರೂಫ್ ಗಾರ್ಡನ್‌ನಿಂದಾಗಿ ತಂಪು ತಂಪು ಕೂಲ್ ಕೂಲ್ :
ಇದು ಬಲು ಅಪರೂಪ. ಈ ಅಪರೂಪಕ್ಕೆ ಕಾರಣ ಒಬ್ಬ ಆಟೋ ಡ್ರೈವರ್. ಕೋಲ್ಕತಾದಲ್ಲೂ ಈಗ ಸಿಕ್ಕಾಪಟ್ಟೆ ಬಿಸಿಲು. ಇದರಿಂದ ಬಚಾವಾಗಲು ತನ್ನ ಆಟೋ ಮೇಲೆಯೇ ರೂಪ್ ಗಾರ್ಡನ್ ಮಾಡಿದ್ದಾನೆ ಆಟೋ ಡ್ರೈವರ್. ಆಟೋದಲ್ಲಿ ಕೂತರೆ ಬಿಸಿಲು ಪ್ರಭಾವ ಬೀರೋದಿಲ್ಲ. ಹಸಿರು ಮತ್ತು ಹಳದಿ ಬಣ್ಣದ ಆಟೋ ಬಂದ್ರೇ ಸಾಕು ಜನ ಒಂದು ಸಾರಿ ಅಚ್ಚರಿಯಿಂದ ನೋಡ್ತಾರೆ. ಹುಲ್ಲು ಮತ್ತು ಸಣ್ಣ ಸಣ್ಣ ಸಸಿಗಳನ್ನ ಆಟೋ ಮೇಲೆ ಬೆಳೆಸಿದ್ದಾನೆ. ಬಂಗಾಳಿ ಭಾಷೆಯಲ್ಲಿ 'ಗಿಡಗಳು ಉಳಿದ್ರೇ ಜೀವಗಳು ಉಳಿದಾವು' ಅನ್ನೋ ಜಾಗೃತಿ ಮೂಡಿಸುವ ಸ್ಲೋಗನ್ ಹಾಕಿದ್ದಾನೆ. ಪರಿಸರ ಜಾಗೃತಿ ಕೂಡ ಈತನ ಮುಖ್ಯ ಧ್ಯೇಯ.
ಟ್ವಿಟರ್ ಕೃಪೆ :ಕಾರ್ ಮೇಲೆ ಗಾರ್ಡನ್ ರೂಫ್ ಗಾರ್ಡನ್‌ನಿಂದಾಗಿ ಆಟೋ ಕೂಡ ಕೂಲ್ ಕೂಲ್ ಆಗಿರುತ್ತೆ. ಪರಿಸರ ರಕ್ಷಣೆ, ಜಾಗೃತಿ ಜತೆ ಆಟೋದೊಳಗೆ ತಂಪುತಂಪಾದ ಅನುಭೂತಿಗಾಗಿ ಈತ ಮಾಡಿದ ಕ್ರಿಯೇಟಿವಿಟಿಗೆ ಪ್ರಶಸ್ತಿ ಕೊಡಲೇಬೇಕು ಬಿಡಿ. ಗಿಡಗಳನ್ನ ಕತ್ತರಿಸಿ ಹೊಸ ಬಿಲ್ಡಿಂಗ್ ಕಟ್ಟಲಾಗುತ್ತಿದೆ. ವುಡ್ ಮತ್ತು ಪೇಪರ್ ಸೇರಿ ಕೈಗಾರಿಕೆಗಳಿಗೆ ಗಿಡಮರ ಕತ್ತರಿಸುತ್ತಿದ್ದೇವೆ. ಪರಿಸರ ಹಾನಿಯಾಗಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದೇವೆ. ಅದಕ್ಕಾಗಿಯೇ ಈಗ ನಾವೆಲ್ಲ ಪರಿಸರ ಉಳಿಸಬೇಕಿದೆ ಅಂತಿದ್ದಾರೆ ಆಟೋಡ್ರೈವರ್. ಈತನ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲೂ ಸಾಕಷ್ಟು ವೈರಲಾಗಿವೆ. ಕೋಲ್ಕತಾದಲ್ಲಿ ಈತನಿಂದ ಪ್ರೇರಣೆ ಪಡೆದು ಟ್ಯಾಕ್ಸಿಗಳ ಮೇಲೂ ರೂಫ್ ಗಾರ್ಡನ್ ಅಳವಡಿಸಿಕೊಳ್ತಾಯಿದ್ದಾರಂತೆ.
ದೆಹಲಿಯಲ್ಲಿ 'ಗ್ರೀನ್ ಗಡ್ಡಿ' ಕಾರುಗಳು ಪ್ಯಾಪುಲರ್ :
ಟ್ವಿಟರ್ ಕೃಪೆ :ಕಾರ್ ಮೇಲೆ ಗಾರ್ಡನ್ ನವದೆಹಲಿ ಈಗ ಉಸಿರಾಡೋದು ಕಷ್ಟ ಸಾಧ್ಯ. ಅಷ್ಟರಮಟ್ಟಿಗೆ ವಾಯು ಮಾಲಿನ್ಯವಾಗಿದೆ. ಅದನ್ನ ತಡೆಯೋದಕ್ಕೆ ಸಾಕಷ್ಟು ಪ್ರಯತ್ನಗಳೂ ನಡೀತಿವೆ. ದೆಹಲಿಯಲ್ಲೀಗ 'ಗ್ರೀನ್ ಗಡ್ಡಿ' ಹೆಸರಿನ ಕಾರುಗಳು ಕೂಡ ಪ್ಯಾಪುಲರಾಗುತ್ತಿವೆ. ಕಾರುಗಳ ಮೇಲೂ ರೂಫ್ ಗಾರ್ಡನ್ ರೂಪಿಸಲಾಗಿದೆ.
ಟ್ವಿಟರ್ ಕೃಪೆ :ಆಟೋ ಮೇಲೆ ಗಾರ್ಡನ್