ಇಂದೋರ್:ಆರ್ಥಿಕ ಹಿಂಜರಿತ , ಕೊರೊನಾ ಬಿಕ್ಕಟ್ಟಿನ ನಂತರ ಇದೀಗ ಮದುವೆಗಳ ಮೇಲೆ ಗ್ರಹಗಳ ಕರಿಛಾಯೆ ಬಿದ್ದಿದೆ. ಇಂದಿನಿಂದ 2021 ಏಪ್ರಿಲ್ 23 ರವರೆಗೆ ಕೇವಲ ಐದು ಶುಭ ದಿನಗಳು ಮಾತ್ರ ಇವೆ. ಹೀಗಾಗಿ ಮದುವೆಯಾಗುವ ಯುವಕ - ಯುವತಿಯರು ವಿವಾಹವಾಗಲು ಬಹಳ ಸಮಯ ಕಾಯಬೇಕಾಗಿದೆ.
ಮದುವೆ ಮೇಲೆ ಗುರು, ಶುಕ್ರನ ವಕ್ರದೃಷ್ಟಿ: ಏ.2021 ರವರೆಗೆ ಇರುವುದು 5 ಶುಭಲಗ್ನಗಳು ಮಾತ್ರ - only five munurthas in 2021 for marriage
ಇಷ್ಟು ದಿನ ಕೊರೊನಾ ಅಂತಾ ಹೇಳಿ ಮದುವೆ ದಿನಾಂಕ ಮುಂದೂಡಿದ್ದಾಯ್ತು. ಇದೀಗ ಗುರು ,ಶುಕ್ರ ಗ್ರಹಗಳ ಪ್ರಭಾವದಿಂದಾಗಿ ಮುಂದಿನ 150 ದಿನಗಳಲ್ಲಿ ಕೇವಲ ಐದು ಮುಹೂರ್ತಗಳು ಮಾತ್ರ ಮದುವೆಗೆ ಲಭ್ಯವಿದೆ.ಇದು ಸಹಜವಾಗೇ ಮದುವೆ ಕನಸುಕಾಣುತ್ತಿದ್ದರವರಿಗೆ ನಿರಾಸೆ ತಂದಿದೆ.
ಪಂಚಾಂಗವನ್ನು ತೆಗೆದು ನೋಡಿದರೆ 23 ಏಪ್ರಿಲ್ 2021 ರವರೆಗೆ ಕೇವಲ ಐದು ಶುಭದಿನಗಳನ್ನು ಕಾಣಬಹುದು , ಅದರಲ್ಲಿ 2020 ರ ನವೆಂಬರ್‌ನಲ್ಲಿ 25 ಮತ್ತು 30 ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 7, 9 ಮತ್ತು 11 ಡಿಸೆಂಬರ್ ರವರೆಗೆ. ನಂತರ ಹೊಸ ವರ್ಷದಲ್ಲಿ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 23ರವರೆಗೆ ವಿವಾಹವಾಗಲು ಒಂದೇ ಒಂದು ಒಳ್ಳೆಯ ಮಹೂರ್ತವಿಲ್ಲ .
ಮುಂದಿನ ಐದು ತಿಂಗಳುಗಳವರೆಗೆ, ಗುರು ಮತ್ತು ಶುಕ್ರ ವಿವಾಹದಂತಹ ಶುಭ ಕಾರ್ಯಗಳಿಗೆ ಶುಭ ನೀಡುವುದಿಲ್ಲ. ಹೀಗಾಗಿ ನಿಗದಿತ ದಿನಾಂಕಗಳನ್ನು ಹೊರತುಪಡಿಸಿ ಮದುವೆ ಮಾಡುವವರು ಏಪ್ರಿಲ್ 2021 ರವರೆಗೆ ಕಾಯಬೇಕಾಗುತ್ತದೆ.