ಕಾಮರೆಡ್ಡಿ(ತೆಲಂಗಾಣ):ಇಲ್ಲಿನ ಕಾಮರೆಡ್ಡಿ ಜಿಲ್ಲೆಯ ಗಾಂಧಾರಿ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಕೈಗೆ ಸಿಕ್ಕ ವಸ್ತುಗಳಲ್ಲೇ ಒಬ್ಬರ ಮೇಲೊಬ್ಬರು ಬಡಿದಾಡಿಕೊಂಡಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಫೈಟ್: ದೂರು ನೀಡಲು ಬಂದವರ ಮಧ್ಯೆ ಮಾರಾಮಾರಿ - ವಿಡಿಯೋ - Ghandhari police station
ಗಲಾಟೆ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ ಇಬ್ಬರು ಅಲ್ಲಿಯೂ ಬಡಿದಾಡಿಕೊಂಡಿದ್ದಾರೆ. ಬೆಂಬಲಿಗರೊಂದಿಗೆ ಆಗಮಿಸಿದ್ದ ಕೈಗೆ ಸಿಕ್ಕ ವಸ್ತುಗಳಲ್ಲಿ ಪರಸ್ಪರ ಮಾರಾಮಾರಿ ನಡೆಸಿದ್ದಾರೆ.
ದೂರು ನೀಡಲು ಬಂದವರ ಮಾರಾಮಾರಿ
ಗಾಂಧಿವೇತ್ ಮಂಡಲ್ಗೆ ಸೇರಿದ ಇಬ್ಬರ ನಡುವೆ ತಡರಾತ್ರಿ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಮತ್ತೊಮ್ಮೆ ವಾಗ್ವಾದ ನಡೆದಿದ್ದು, ಅಲ್ಲಿಯೂ ಹೊಡೆದಾಡಿಕೊಂಡಿದ್ದಾರೆ.
ಕೈಗೆ ಸಿಕ್ಕ ಕುರ್ಚಿ, ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಬಡಿದಾಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.