ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಅರಿಯಲು ಕರೆ ಮಾಡಿದ್ದು, ಇದು ಅವರ ನಾಲ್ಕನೇ ಕರೆ ಆಗಿದೆ ಎಂದು ಉತ್ತರಾಖಂಡ್ ಸಿಎಂ ತಿಳಿಸಿದ್ದಾರೆ.
LIVE: ಹಿಮನದಿ ದುರಂತ... 7 ಜನ ಸಾವು, 170 ಮಂದಿ ನಾಪತ್ತೆ! - ಉತ್ತರಾಖಂಡ ದುರಂತ
22:31 February 07
ಪಿಎಂ ಮೋದಿ ಕರೆ
21:16 February 07
ದುರಂತಕ್ಕೆ 7 ಬಲಿ
ಹಿಮನದಿ ದುರಂತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದು, 170 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
21:04 February 07
ರಕ್ಷಣಾ ಕಾರ್ಯದಲ್ಲಿ ಎದುರಾಗುತ್ತಿವೆ ಸವಾಲುಗಳು
ಜಲ ಪ್ರಳಯದ ಆರಂಭದಲ್ಲಿ ನೀರಿನ ಹರಿವು ತುಂಬಾ ವೇಗವಾಗಿ ಇದ್ದ ಕಾರಣ ಘಟನೆ ನಡೆದ ಸ್ಥಳದಿಂದ ದೂರದಲ್ಲಿರುವ ಶವಗಳನ್ನು ಪಡೆದುಕೊಳ್ಳಲಾಗುತ್ತಿದೆ. ಕೆಲವರು ಆಳವಾದ ಪ್ರದೇಶಗಳಲ್ಲಿ ಮತ್ತು ಇತರರು ಸುರಂಗಗಳಲ್ಲಿ ಸಿಕ್ಕಿಕೊಂಡಿರುವ ಕಾರಣ ಅಲ್ಲಿಗೆ ಪ್ರವೇಶಿಸಲು ಕಷ್ಟಸಾಧ್ಯವಾಗುತ್ತಿದೆ ಎಂದು ಎನ್ಡಿಆರ್ಎಫ್ನ ಐಜಿ ಅಮ್ರೇಂದ್ರ ಕುಮಾರ್ ಸೆಂಗಾರ್ ತಿಳಿಸಿದರು.
20:58 February 07
ಎರಡನೇ ಸುರಂಗದತ್ತ ಗಮನ
ಹಿಮನದಿ ದುರಂತಕ್ಕೆ ಸಂಬಂಧಿಸಿದ ಎರಡನೇ ಸುರಂಗದತ್ತ ಗಮನ ಹರಿಸಿದ್ದೇವೆ. ಮೊದನೇಯದು ಅಂದರೆ ಈ ಮೊದಲ ಸುರಂಗದಲ್ಲಿ ನಾವು ಸುಮಾರು 30 ಜನರನ್ನು ರಕ್ಷಿಸಿದ್ದೇವೆ. ನಾವು ಇಂದು ರಾತ್ರಿ ಕಾರ್ಯಾಚರಣೆ ನಡೆಸಲಿದ್ದು, ನಮ್ಮ ತಂಡಗಳು ಕಾರ್ಯಪ್ರವೃತ್ತವಾಗಿವೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುತ್ತೇವೆಂದು ಭಾವಿಸಿದ್ದೇನೆ ಎಂದು ಐಟಿಬಿಪಿ ಪಿಆರ್ಒ ವಿವೇಕ್ ಪಾಂಡೆ ತಿಳಿಸಿದ್ದಾರೆ.
20:34 February 07
ಮುಂದುವರೆದ ರಕ್ಷಣಾ ಕಾರ್ಯ
ಐಎಎಫ್ ವಿಪತ್ತು ಪರಿಹಾರ ಕಾರ್ಯಪಡೆಯ ಭಾಗವಾಗಿ, ಸಿ130 ಜೆ ಸೂಪರ್ ಹರ್ಕ್ಯುಲಸ್ ವಿಮಾನವು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ತಂಡಗಳು ಮತ್ತು ಇತರೆ ಭಾರೀ ಸಲಕರಣೆಗಳೊಂದಿಗೆ ಬಂದಿಳಿದಿದೆ.
19:27 February 07
ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ
ಹಿಮನದಿ ದುರಂತದಲ್ಲಿ ಮೃತಪಟ್ಟವರ ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ.
19:21 February 07
ರಕ್ಷಿಸಿದವರನ್ನು ಸ್ಟ್ರೆಚರ್‌ಗಳಲ್ಲಿ ಹೊತ್ತೊಯ್ದ ಐಟಿಬಿಪಿ ಸಿಬ್ಬಂದಿ
ಹಿಮನದಿ ದುರಂತದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗುತ್ತಿದ್ದು, ಈಗಾಗಲೇ ರಕ್ಷಿಸಿರುವವರನ್ನು ಐಟಿಬಿಪಿ ಸಿಬ್ಬಂದಿಯು ಹತ್ತಿರದ ರಸ್ತೆ ಬಳಿಗೆ ಸ್ಟ್ರೆಚರ್‌ಗಳಲ್ಲಿ ಹೊತ್ತೊಯ್ದಿದ್ದಾರೆ.
19:13 February 07
ಸಂತ್ರಸ್ತರ ಕುಟುಂಬಕ್ಕೆ ಪರಿಹಾರ
- ಹಿಮಪಾತದಿಂದ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
18:13 February 07
ರಕ್ಷಣಾ ಕಾರ್ಯ
ಭರದಿಂದ ಸಾಗಿದ ರಕ್ಷಣಾ ಕಾರ್ಯ
18:06 February 07
- ಚಮೋಲಿಯ ತಪೋವನ ಡ್ಯಾಂ ಬಳಿಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಓರ್ವನನ್ನು ರಕ್ಷಣಾ ಪಡೆ ರಕ್ಷಿಸಿದೆ.
17:40 February 07
ವಿಷ್ಣುಪ್ರಯಾಗ್, ರುದ್ರಪ್ರಯಾಗ್, ರಿಷಿಕೇಶ್, ಹರಿದ್ವಾರ ಹಾಗೂ ಗಂಗಾ ತೀರಕ್ಕೆ ಹೋಗದಂತೆ ಜನರಿಗೆ ಚಮೋಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ..
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದಿದ್ದು, ಸುತ್ತಲಿನ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ತಪೋವನ್ ಬಳಿಯ ಸುರಂಗದಲ್ಲಿ ಸಿಲುಕಿದ್ದ 16 ಜನರನ್ನು ಐಟಿಬಿಪಿ ರಕ್ಷಿಸಿದೆ. ಹಿಮನದಿ ಒಡೆದ ಕಾರಣ ದೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ.
ಹೀಗಾಗಿ ಪ್ರವಾಹ ಉಂಟಾಗಿದ್ದು, ರಾಣಿ ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ. ಜೋಶಿಮಠದಲ್ಲಿ ನಡೆಯುತ್ತಿರುವ ರೈಲ್ವೆ ನಿರ್ಮಾಣ ಕಾಮಗಾರಿ ಸೇರಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ವಿಷ್ಣುಪ್ರಯಾಗ್, ರುದ್ರಪ್ರಯಾಗ್, ರಿಷಿಕೇಶ್, ಹರಿದ್ವಾರ ಹಾಗೂ ಗಂಗಾ ತೀರಕ್ಕೆ ಹೋಗದಂತೆ ಜನರಿಗೆ ಚಮೋಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
100 ರಿಂದ 150 ಮಂದಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಮೂರು ಶವ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋ - ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.