ಕೋಲ್ಕತ್ತಾ(ಪ.ಬಂಗಾಳ):ಇಡೀ ದೇಶವೇ ಅತ್ಯಂತ ಕಾತರದಿಂದ ಕಾಯುತ್ತಿರುವ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 2.43ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ರಾಕೆಟ್ ಉಡಾವಣೆಯಾಗಲಿದೆ.
ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ... ಇಂದು ಚಂದಿರನತ್ತ ಬಾಹುಬಲಿ ಪಯಣ
ಎರಡನೇ ಬಾರಿಗೆ ಚಂದಿರನತ್ತ ಪಯಣಿಸಲು ಸರ್ವ ಸನ್ನದ್ಧವಾಗಿರುವ ಇಸ್ರೋದ ಈ ಯೋಜನೆಯ ಹಿಂದೆ ನೂರಾರು ವಿಜ್ಞಾನಿಗಳ ಅವಿರತ ಶ್ರಮ ಅಡಗಿದೆ. ಕೋಲ್ಕತ್ತಾ ಮೂಲದ ಚಂದ್ರಕಾಂತ, ಚಂದ್ರಯಾನ-2 ಯೋಜನೆ ಹಿಂದಿರುವ ಪ್ರಮುಖ ಹಾಗೂ ಹಿರಿಯ ವಿಜ್ಞಾನಿ.
ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿಯ ಶಿಬಪುರ ಗ್ರಾಮದ ಸಾಮಾನ್ಯ ರೈತರ ಮಗನಾಗಿ ಜನಿಸಿದ ಚಂದ್ರಕಾಂತ ಇದೀಗ ಇಡೀ ದೇಶವೇ ಹೆಮ್ಮೆಪಡುವ ಕಾರ್ಯದ ಪ್ರಮುಖ ರೂವಾರಿ ಅನ್ನೋದು ವಿಶೇಷ.
ಚಂದ್ರಕಾಂತ ಅವರ ಹೆತ್ತವರು ತಮ್ಮ ಮಗನಿಗೆ ಸೂರ್ಯಕಾಂತ ಎಂದು ಹೆಸರಿಡುವ ಆಸೆ ಹೊಂದಿದ್ದರು. ಆದರೆ ಶಾಲೆಯಲ್ಲಿ ಶಿಕ್ಷಕರ ಸಲಹೆಯಂತೆ ಚಂದ್ರಕಾಂತ ಎಂದು ನಾಮಕರಣ ಮಾಡಿದ್ದರು. ವಿಶೇಷವೆಂದರೆ ಹೆಸರಿನಲ್ಲೇ ಚಂದ್ರ ಹೊಂದಿರುವ ಚಂದ್ರಕಾಂತ ಇಂದು ಚಂದ್ರಯಾನ-2 ಯೋಜನೆಯಲ್ಲಿ ಭಾಗಿಯಾಗಿ ತಮ್ಮ ಹೆಸರಿಗೆ ವಿಶಿಷ್ಟ ರೀತಿಯಲ್ಲಿ ಸಾರ್ಥಕತೆ ಮೆರೆದಿದ್ದಾರೆ.
54 ದಿನದ ಪಯಣ, 14 ದಿನದ ಅಧ್ಯಯನ... ಬಾಹುಬಲಿ ರಾಕೆಟ್ ಉಡಾವಣೆಯತ್ತ ವಿಶ್ವದ ಕಣ್ಣು..!
2001ರಲ್ಲಿ ಇಸ್ರೋ ಸೇರಿದ ಚಂದ್ರಕಾಂತ ಕಠಿಣ ಪರಿಶ್ರಮದ ಮೂಲಕ ಇಂದು ದೇಶದ ಪ್ರತಿಷ್ಠಿತ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಮುಗಿಸಿದ್ದು, ಉಡಾವಣೆಯ ನಂತರದ ಹಂತಗಳ ಸವಾಲು ಈ ಹಿರಿಯ ವಿಜ್ಞಾನಿ ಮುಂದಿದೆ.