ಮುಂಬೈ:ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ರಸ್ತೆ ಗುಂಡಿಗಳ ಸ್ಥಿತಿ ಸದ್ಯ ಮುಂಬೈನಲ್ಲೂ ನಿರ್ಮಾಣವಾಗಿದ್ದು, ಯುವ ವೈದ್ಯೆ ದಾರುಣವಾಗಿ ಮೃತಪಟ್ಟಿದ್ದಾರೆ.
23 ವರ್ಷದ ವೈದ್ಯೆನೇಹಾ ಶೇಖ್ ಕ್ಲಿನಿಕ್ ಮುಗಿಸಿಕೊಂಡು ಸಹೋದರನೊಂದಿಗೆ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಕೂಟರ್ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದಾಗ ಚಕ್ರ ಏಕಾಏಕಿಯಾಗಿ ರಸ್ತೆಯಲ್ಲಿದ್ದ ಹೊಂಡವೊಂದಕ್ಕೆ ಇಳಿದಿದೆ. ಈ ವೇಳೆ ನೇಹಾ ಆಯಾತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ವೇಗವಾಗಿ ಹಿಂದಿನಿಂದ ಬಂದಿರುವ ಟ್ರಕ್ ಆಕೆಯ ಮೇಲೆ ಹರಿದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ರು.