ಕರ್ನಾಟಕ

karnataka

ETV Bharat / bharat

ಗೋರಖ್‌ಪುರದಲ್ಲಿ ಅವಳಿ ಕೊಲೆ... ಆರೋಪಿಯನ್ನು ಬಂಧಿಸುವಂತೆ ಉಗ್ರ ಪ್ರತಿಭಟನೆ! - ಆರೋಪಿಯನ್ನು ಬಂಧಿಸುವಂತೆ ಉಗ್ರ ಪ್ರತಿಭಟನೆ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅವಳಿ ಕೊಲೆ ನಡೆದು ಮೂರು ದಿನಗಳು ಕಳೆದಿದ್ದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಲಿಲ್ಲ ಎಂದು ಸ್ಥಳೀಯರು ಗೋರಖ್‌ಪುರ-ದೇವ್ರಿಯಾ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಬಂದ್ ಮಾಡಿ ಟೈರ್‌ಗಳನ್ನು ಸುಟ್ಟು ಕೂಡಲೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು.

protest
protest

By

Published : May 28, 2020, 8:02 AM IST

ಗೋರಖ್‌ಪುರ (ಉತ್ತರ ಪ್ರದೇಶ): ಕಳೆದ ಭಾನುವಾರ ನಡೆದ ಅವಳಿ ಕೊಲೆ ಪ್ರಕರಣದಿಂದಾಗಿ ಉತ್ತರ ಪ್ರದೇಶದ ಗೋರಖ್‌ಪುರದ ಜಂಗಾಹಾ ಪ್ರದೇಶದಲ್ಲಿ ನಿನ್ನೆ ತೀವ್ರ ಉದ್ವಿಗ್ನತೆ ಉಂಟಾಗಿದೆ.

ಕಳೆದ ಭಾನುವಾರ ಅಪರಿಚಿತ ದುಷ್ಕರ್ಮಿಯೊಬ್ಬ ಇಬ್ಬರು ಸಹೋದರರೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ಮಾಡುತ್ತಿದ್ದನು. ಕೋಪಗೊಂಡು ಜಗಳ ಹಿಂಸಾತ್ಮಕ ಸ್ವರೂಪ ಪಡೆದಾಗ, ದುಷ್ಕರ್ಮಿ ಸಹೋದರರಿಬ್ಬರ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಹಿನ್ನೆಲೆ, ನಿನ್ನೆ ಸ್ಥಳೀಯರು ಗೋರಖ್‌ಪುರ-ದೇವ್ರಿಯಾ ರಾಷ್ಟ್ರೀಯ ಹೆದ್ದಾರಿ ಬಳಿ ಟೈರ್‌ಗಳನ್ನು ಸುಟ್ಟು ರಸ್ತೆ ಬಂದ್ ಮಾಡಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.ಕೋಪಗೊಂಡ ಸ್ಥಳೀಯರು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಸಮಾಧಾನಪಡಿಸಲು ಪ್ರಯತ್ನಿಸಿದ ಪೊಲೀಸ್ ಸಿಬ್ಬಂದಿಯ ಮೇಲೆಯೂ ಕಲ್ಲು ತೂರಾಟ ನಡೆಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಪಡೆಯ ಒಂದು ತುಕಡಿಯನ್ನು ಸ್ಥಳದಲ್ಲಿಯೇ ನಿಯೋಜಿಸಲಾಗಿದೆ."ಪರಾರಿಯಾಗಿದ್ದ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details