ಹೈದರಾಬಾದ್:ಗೂಗಲ್ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ ಮಹಿಳೆಯೋರ್ವರ ಹೆಸರನ್ನು ಅಳಿಸದ ಆರೋಪದಲ್ಲಿ ಮೌನ ತಾಳಿರುವ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ನೀಡಿರುವ ತೆಲಂಗಾಣ ಹೈಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ನಗರ ಪ್ರದೇಶದ ವೃತ್ತಿನಿರತ ಮಹಿಳೆಯೋರ್ವರು ತನ್ನ ಹೆಸರನ್ನ ಗೋಗಲ್ನಲ್ಲಿ ಸರ್ಚ್ ಕೊಟ್ಟಾಗ, ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಆಕೆಯ ಹೆಸರು ಹಾಗೂ ಸರ್ ನೇಮ್ ಕಾಣಿಸಿಕೊಳ್ಳುತ್ತಿದೆ. ಇದರಿಂದ ನನ್ನ ಹೆಸರಿಗೆ ಧಕ್ಕೆಯಾಗುವ ಕೆಲಸವಾಗುತ್ತಿದೆ. ಅಲ್ಲದೇ ನಾನು ಕೆಲಸ ಮಾಡುವ ಕಚೇರಿಯಲ್ಲಿ ನನ್ನ ಸಹುದ್ಯೋಗಿಗಳು ಟೀಕಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ನ್ಯಾಯಾಧೀಶ ಎ.ರಾಜಶೇಖರ್ ರೆಡ್ಡಿ, ಇದೀಗ ಈ ವಿಚಾರದಲ್ಲಿ ಮೌನ ತಾಳಿರುವ ಗೂಗಲ್ಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.