ಕರ್ನಾಟಕ

karnataka

ಟಿಆರ್‌ಎಸ್‌ ಜೊತೆ 'ಕೈ' ವಿಲೀನ ವಿವಾದ: ಬಂಡಾಯ ಶಾಸಕರಿಂದ ಉಪವಾಸ ಸತ್ಯಾಗ್ರಹ

By

Published : Jun 8, 2019, 4:39 PM IST

12 ಕಾಂಗ್ರೆಸ್ ಶಾಸಕರು ತೆಲಂಗಾಣ ಸ್ಪೀಕರ್ ಪಿ. ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ ಆಡಳಿತಾರೂಢ ಟಿಆರ್​ಎಸ್ ಜೊತೆ ಕಾಂಗ್ರೆಸ್‌ನ್ನು ವಿಲೀನಗೊಳಿಸುವ ಬಗ್ಗೆ ನಿವೇದನಾ ಪತ್ರ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸುವಂತೆ ಒತ್ತಾಯಿಸಿ ಇದೀಗ ಶಾಸಕರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಉಪವಾಸ್ ಸತ್ಯಾಗ್ರಹ ನಿರತ ಶಾಸಕರು

ಹೈದರಾಬಾದ್​:ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ತೊರೆದು ಟಿಆರ್​ಎಸ್​ ಸೇರಲು ಮುಂದಾಗಿರುವ 12 ಶಾಸಕರು ತೆಲಂಗಾಣ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

12 ಕಾಂಗ್ರೆಸ್ ಶಾಸಕರು ತೆಲಂಗಾಣ ಸ್ಪೀಕರ್ ಪಿ. ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ ಸಿಎಲ್​ಪಿಯಿಂದ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಆಡಳಿತಾರೂಢ ಟಿಆರ್​ಎಸ್ ಜೊತೆ ವಿಲೀನವಾಗುವ ಬಗ್ಗೆ ನಿವೇದನಾ ಪತ್ರವನ್ನು ಸಲ್ಲಿಸಿದ್ದರು.

ಇದೀಗ ತಮ್ಮ ಮನವಿಯನ್ನು ಪುರಸ್ಕರಿಸುವಂತೆ ಆಗ್ರಹಿಸಿ ಕೈ ಪಕ್ಷದ 12 ಮಂದಿ ಶಾಸಕರು ಕಳೆದ 36 ಗಂಟೆಗಳಿಂದಇಲ್ಲಿನ ಧರಣಿ ವೃತ್ತದಲ್ಲಿ ಉಪವಾಸ ಸತ್ಯಗ್ರಹವನ್ನು ಕೈಗೊಂಡಿದ್ದಾರೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಶಾಸಕರನ್ನು ಹೊಂದಿದ್ದು, ಈ ಪೈಕಿ ಕಾಂಗ್ರೆಸ್ಸಿನ 12 ಶಾಸಕರು ಟಿಆರ್​ಎಸ್ ಸೇರುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಕಾಂಗ್ರೆಸ್ ಶಾಸಕರ ಮನವಿಯನ್ನು ಒಪ್ಪಿಕೊಂಡರೆ, ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ.

For All Latest Updates

TAGGED:

ABOUT THE AUTHOR

...view details