ನಾರಾಯಣಪುರ: ಇನ್ನು ಛತ್ತೀಸ್ಗಢ್ನಲ್ಲಿ ‘ಪಡಾಯಿ ತುಮಾರಾ ದ್ವಾರ್’ (ಅಭ್ಯಾಸವೇ ನಿನ್ನ ಬಾಗಿಲು) ಎಂಬ ಆನ್ಲೈನ್ ಪೊರ್ಟಲ್ ಶುರುಮಾಡಿದ್ದಾರೆ. ಈ ಮೂಲಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.
ಆನ್ಲೈನ್ ಜೊತೆ ಆಫ್ಲೈನ್ ಪಾಠ ಇನ್ನು ಛತ್ತೀಸ್ಗಢ್ದಲ್ಲಿ ನಕ್ಸಲ್ ಪ್ರಭಾವಿತ ಏರಿಯಾಗಳು ಸಹ ಇವೆ. ಅಲ್ಲಿ ಸರಿಯಾಗಿ ನೆಟ್ವರ್ಕ್ ಸಹ ಸಿಗುವುದಿಲ್ಲ. ಅಂತಹ ಗ್ರಾಮದಲ್ಲಿ ಶಿಕ್ಷಣ ಯಾವರೀತಿ ಇರುತ್ತೆ ಗೊತ್ತಾ?.
ಹೌದು, ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಸರಿಯಾಗಿ ನೆಟ್ವರ್ಕ್ ಸಿಗುವುದಿಲ್ಲ. ಆನ್ಲೈನ್ ಅಭ್ಯಾಸಕ್ಕೆ ತೊಂದರೆಯಾಗುವುದು. ಹೀಗಾಗಿ ಇಲ್ಲಿನ ಕೆಲ ಶಿಕ್ಷಕರು ಕೆಲವೊಂದು ಉಪಾಯ ಕಂಡು ಕೊಂಡಿದ್ದಾರೆ.
ಶಿಕ್ಷಕರು ಆಫ್ಲೈನ್ ವರ್ಚುಲ್ ಕ್ಲಾಸ್ ಶುರು ಮಾಡಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಇದರಿಂದ ಮಕ್ಕಳ ಸಹ ಖುಷಿಯಾಗಿ ಅಭ್ಯಾಸ ಮಾಡುತ್ತಿದ್ದಾರೆ.
ನಾರಾಯಣಪುರ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋರ್ಟಲ್ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಕುಳಿತು ಶಿಕ್ಷಕರು ಪಾಠ ಹೇಳುತ್ತಿದ್ದಾರೆ. ಇದರ ಲಾಭವನ್ನು ಮಕ್ಕಳು ಪಡೆಯುತ್ತಿದ್ದಾರೆ.
ಇನ್ನು ಆಫ್ಲೈನ್ ಕ್ಲಾಸ್ನಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಶಿಕ್ಷಕರು ಮಕ್ಕಳಿಗೆ ಅಭ್ಯಾಸದ ಜೊತೆ ಕೊರೊನಾದಿಂದ ಹೇಗೆ ಜಾಗೃತಗೊಳ್ಳಬೇಕು, ಸ್ಯಾನಿಟೈಸರ್ ಉಪಯೋಗ, ಸಾಮಾಜಿಕ ಅಂತರದ ಬಗ್ಗೆಯೂ ಸಹ ತಿಳಿಸಿಕೊಡುತ್ತಿದ್ದಾರೆ. ಇನ್ನು ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಇದಲ್ಲದೇ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಈ ಎರಡು ಗಂಟೆಯಲ್ಲಿ ಗಣಿತ, ಇಂಗ್ಲಿಷ್, ವಿಜ್ಞಾನ ಮತ್ತು ಹಿಂದಿ ಪಾಠದ ಬಗ್ಗೆ ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ.
ಇನ್ನು ಸಿಎಂ ಭೂಪೇಶ್ ಬಘೇಲ್ ಅವರು ಏಪ್ರಿಲ್ 7ರಂದು ‘ಪಡಾಯಿ ತುಮಾರಾ ದ್ವಾರ್’ ಎಂಬ ಯೋಜನೆ ಶುರು ಮಾಡಿದ್ದರು. ಈ ಯೋಜನೆಯ ಉದ್ದೇಶ ಮನೆಯಲ್ಲೇ ಕುಳಿತು ಮಕ್ಕಳಿಗೆ ಪಾಠ ನೀಡುವುದಾಗಿದೆ. ಛತ್ತೀಸ್ಗಢದ ಶಾಸಾನ ಶಾಲಾ ಶಿಕ್ಷಾ ವಿಭಾಗವೂ ಎನ್ಐಸಿ ಸಹಾಯದಿಂದ ಆನ್ಲೈನ್ ಶಿಕ್ಷಣ ಪೋರ್ಟಲ್ ‘ಪಡಾಯಿ ತುಮಾರಾ ದ್ವಾರ್’ ಶುರು ಮಾಡಿದರು.
ಈ ಪೋರ್ಟಲ್ನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕೆಲ ಪಠ್ಯಗಳನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ ಈ ಪೋರ್ಟಲ್ನಲ್ಲಿ ಲಕ್ಷಾಂತರ ಮಕ್ಕಳು ರಿಜಿಸ್ಟರ್ ಆಗಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಪೋರ್ಟಲ್ನಲ್ಲಿ ಗುರುಗಳದ್ದೇ ಪ್ರಮುಖ ಪಾತ್ರವಾಗಿದೆ. ಆನ್ಲೈನ್ ಮತ್ತು ಆಫ್ಲೈನ್ನಿಂದ ಲಕ್ಷಾಂತರ ಮಕ್ಕಳು ಅಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ.