ಕರ್ನಾಟಕ

karnataka

ETV Bharat / bharat

ಟಿಡಿಪಿಗೆ ಮತ್ತೊಂದು ಆಘಾತ...! ಪಕ್ಷದ ವಕ್ತಾರ ಬಿಜೆಪಿ ಸೇರ್ಪಡೆ - ಬಿಜೆಪಿ

ಟಿಡಿಪಿಯ ನಾಲ್ವರು ಸಂಸದರು ಬಿಜೆಪಿ ಸೇರ್ಪಡೆಯಾಗಿ ವಾರ ಕಳೆಯೋದರೊಳಗೆ ಟಿಡಿಪಿ ವಕ್ತಾರ ಲಂಕಾ ದಿನಕರ್ ಸಹ ಅದೇ ಹಾದಿ ಹಿಡಿದಿದ್ದಾರೆ.

ಲಂಕಾ ದಿನಕರ್

By

Published : Jun 27, 2019, 11:47 AM IST

ನವದೆಹಲಿ:ತೆಲುಗು ದೇಶಂ ಪಾರ್ಟಿಯಲ್ಲಿ ಪಕ್ಷಾಂತರ ರಾಜಕಾರಣ ಮುಂದುವರೆದಿದ್ದು ಇದೀಗ ಪಕ್ಷದ ವಕ್ತಾರ ಲಂಕಾ ದಿನಕರ್​ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಟಿಡಿಪಿ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡುಗೆ ರಾಜೀನಾಮೆ ಪತ್ರ ಸಲ್ಲಿಸಿ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಲಂಕಾ ದಿನಕರ್​ ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ.

ಟಿಡಿಪಿಗೆ ಮತ್ತೊಂದು ಆಘಾತ: ಬಿಜೆಪಿ ಸೇರಿದ ನಾಲ್ವರು ಸಂಸದರು

ಕೆಲ ದಿನಗಳ ಹಿಂದೆ ಟಿಡಿಪಿಯ ನಾಲ್ವರು ಸಂಸದರು ಬಿಜೆಪಿ ಸೇರ್ಪಡೆಯಾಗಿದ್ದರು. ಭಾರತೀಯ ಜನತಾ ಪಾರ್ಟಿ ತಮ್ಮ ಪಕ್ಷದ ಶಕ್ತಿ ಉಡುಗಿಸುವ ಕಾರ್ಯ ಮಾಡುತ್ತಿದೆ ಎಂದು ನಾಯ್ಡು ಕಿಡಿಕಾರಿದ್ದರು.

ABOUT THE AUTHOR

...view details