ಕರ್ನಾಟಕ

karnataka

ETV Bharat / bharat

ಟಾಟಾ ಸ್ಟೀಲ್ ಭಾರತದ ಅತ್ಯಮೂಲ್ಯ ಬ್ರಾಂಡ್:  ಫೈನಾನ್ಸ್ ವರದಿ - brand finance report

ಜಾಗತಿಕ ಸಂಸ್ಥೆ 'ಬ್ರಾಂಡ್ ಫೈನಾನ್ಸ್' ತನ್ನ ವಾರ್ಷಿಕ 'ಇಂಡಿಯಾ 100 - 2020' ವರದಿಯಲ್ಲಿ, ಟಾಟಾ ಸ್ಟೀಲ್​​ ಅನ್ನು ಭಾರತದ ಅತ್ಯಮೂಲ್ಯ ಲೋಹ ಮತ್ತು ಗಣಿಗಾರಿಕೆ ಬ್ರಾಂಡ್ ಎಂದು ಪಟ್ಟಿ ಮಾಡಿದೆ.

tata
tata

By

Published : Jun 20, 2020, 12:05 PM IST

ಜಮ​ಶೆಡ್​​​​​​ಪುರ (ಜಾರ್ಖಂಡ್​): ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸ್ಟೀಲ್ , ಉಕ್ಕು ಉದ್ಯಮದಲ್ಲಿ ವಿಶ್ವದಲ್ಲಿಯೇ ದೊಡ್ಡ ಖ್ಯಾತಿ ಗಳಿಸಿದೆ. ಜಾಗತಿಕ ಸಂಸ್ಥೆ 'ಬ್ರಾಂಡ್ ಫೈನಾನ್ಸ್' ತನ್ನ ವಾರ್ಷಿಕ 'ಇಂಡಿಯಾ 100- 2020' ವರದಿಯಲ್ಲಿ, ಟಾಟಾ ಸ್ಟೀಲ್​​​​ ಅನ್ನು ಭಾರತದ ಅತ್ಯಮೂಲ್ಯ ಲೋಹ ಮತ್ತು ಗಣಿಗಾರಿಕೆ ಬ್ರಾಂಡ್ (ಹೆಚ್ಚು ಮೌಲ್ಯಯುತ ಮೆಟಲ್ ಮತ್ತು ಮೈನಿಂಗ್ ಬ್ರಾಂಡ್) ಎಂದು ಪಟ್ಟಿ ಮಾಡಿದೆ.

ವರದಿ ಪ್ರಕಾರ, ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿಯಾಗಿದೆ. 1.348 ಬಿಲಿಯನ್ ಡಾಲರ್​​​​​​​​​​​​​​​ ಬ್ರಾಂಡ್ ಮೌಲ್ಯವನ್ನು ಹೊಂದಿದ್ದು, ಇದು ಹಿಂದಿನ ವರ್ಷಕ್ಕಿಂತ 16 ಶೇಕಡಾದಷ್ಟು ಹೆಚ್ಚಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ಬ್ರಾಂಡ್ ಫೈನಾನ್ಸ್‌ನ ಮತ್ತೊಂದು ವರದಿಯಲ್ಲಿ, ಗಣಿಗಾರಿಕೆ, ಕಬ್ಬಿಣ ಮತ್ತು ಉಕ್ಕಿನ ಟಾಪ್ 25 ಜಾಗತಿಕ ಬ್ರಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಸ್ಟೀಲ್ 14ನೇ ಸ್ಥಾನದಲ್ಲಿದೆ.

ಮಾರುಕಟ್ಟೆ ಹೂಡಿಕೆ, ಬ್ರಾಂಡ್ ಟ್ರ್ಯಾಕಿಂಗ್ ಡೇಟಾ ಮತ್ತು ಷೇರುದಾರರ ನಡವಳಿಕೆಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಬ್ರಾಂಡ್ ಮೌಲ್ಯ ಸರಪಳಿಯನ್ನು ಮೌಲ್ಯಮಾಪನ ಮಾಡಲಾಗಿದೆ. ಪ್ರತಿ ವರ್ಷ ಬ್ರಾಂಡ್ ಫೈನಾನ್ಸ್ ವಿಶ್ವದ ಐದು ಸಾವಿರ ದೊಡ್ಡ ಬ್ರಾಂಡ್‌ಗಳನ್ನು ಮೌಲ್ಯಮಾಪನ ಮಾಡುತ್ತದೆ.

ABOUT THE AUTHOR

...view details