ಹೈದರಾಬಾದ್: 2016ರಿಂದ ಯುಎನ್ನಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನಿರ್ವಹಿಸಿದ ಜವಾಬ್ದಾರಿಗಳನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಾ.
370ನೇ ವಿಧಿ ರದ್ದುಪಡಿಸಿದ ಬಳಿಕ ಪಾಕಿಸ್ತಾನವು ಈ ವಿಚಾರವನ್ನು ಯುನೈಟೆಡ್ ನೇಷನ್ಸ್(ಯುಎನ್)ನ ಗಮನಕ್ಕೆ ತಂದಿತು. ಆದರೆ, ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳನ್ನು ಅಂತಾರಾಷ್ಟ್ರೀಕರಿಸುವ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿತು. ಕಾಶ್ಮೀರದ ಯುಎನ್ ಭದ್ರತಾ ಮಂಡಳಿಯ ಸಮಾಲೋಚನೆ ಸಭೆಯಲ್ಲೂ ಈ ಬಗೆಗಿನ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಅಥವಾ ಜಂಟಿ ಹೇಳಿಕೆ ನೀಡಲು ವಿಫಲವಾಯ್ತು.
ಭಾರತದ ರಾಜತಂತ್ರಜ್ಞ ಅಕ್ಬರುದ್ದೀನ್ ಈ ಬಗ್ಗೆ ಯುಎನ್‌ನ ಚೀನಾ ಮತ್ತು ಪಾಕಿಸ್ತಾನದ ರಾಯಭಾರಿಗಳು ಮಾಧ್ಯಮ ಹೇಳಿಕೆಗಳನ್ನು ನೀಡುತ್ತಾ, ಭಾರತದ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ, ಯುಎನ್‌ನ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು, "ಚೀನಾ ಮತ್ತು ಪಾಕ್‌ನ ರಾಯಭಾರಿಗಳು ತಮ್ಮ ಹೇಳಿಕೆಗಳನ್ನು ಯುಎನ್‌ಎಸ್‌ಸಿ ಮುಂದೆ ಮಂಡಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ" ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.
ಆ ಸಂದರ್ಭ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್, ಯುಎನ್ಎಸ್ಸಿಯಲ್ಲಿ ಭಾರತದ ಸ್ಥಾನಮಾನವನ್ನು ಪ್ರಸ್ತುತಪಡಿಸಿದ ರೀತಿಗೆ ಪತ್ರಿಕಾಗೋಷ್ಠಿಯ ಕೇಂದ್ರ ಬಿಂದುವಾಗಿಬಿಟ್ಟರು. ಸುದ್ದಿಗೋಷ್ಠಿಯಲ್ಲಿ ಸೇರಿದ್ದ ಎಲ್ಲಾ ಪತ್ರಕರ್ತರ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿ, ಪಾಕ್ ಹಾಗೂ ಚೀನಾ ರಾಯಭಾರಿಗಳು ಕೂಡಾ ತಲೆ ತಗ್ಗಿಸುವಂತೆ ಮಾಡಿದರು.
ಈ ಘಟನೆ ನಡೆಯುವುದಕ್ಕೂ ಮುನ್ನ ಸೈಯದ್ ಅಕ್ಬರುದ್ದೀನ್ ಅವರು ಅಷ್ಟೊಂದು ಸುದ್ದಿಯಾಗಿರಲಿಲ್ಲ. ಆದರೆ, ಅಂದಿನಿಂದ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಹಾಗಿದ್ದರೆ, ಈ ಸೈಯದ್ ಅಕ್ಬರುದ್ದೀನ್ ಯಾರು ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು.
ಚೀನಾ-ಪಾಕ್ ರಾಯಭಾರಿಗಳಿಗೂ ಕೊಟ್ಟರು ತಿರುಗೇಟು.. 1985ರಲ್ಲಿ ಭಾರತದ ಮೊದಲ ಐಎಫ್ಎಸ್(ವಿದೇಶಿ ಸೇವಾ ಅಧಿಕಾರಿ)ಯಾಗಿ ಕಾರ್ಯನಿರ್ವಹಿದವರು ಈ ಸೈಯದ್ ಅಕ್ಬರುದ್ದೀನ್. 1995ರಿಂದ 1998 ವರೆಗೆ ಅವರು ಯುಎನ್‌ನ ಭಾರತೀಯ ಮಿಷನ್‌ನಲ್ಲಿ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಈ ವೇಳೆ ಯುಎನ್ ಭದ್ರಾತಾ ಮಂಡಳಿಯ ಸುಧಾರಣೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ನಿರರ್ಗಳವಾಗಿ ಅರೇಬಿಕ್ ಮಾತನಾಡುತ್ತಿದ್ದ ಸೈಯದ್, ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್‌ನ ಕೌನ್ಸಿಲರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ವಿಯೆಟ್ನಾಂನಲ್ಲಿ ಇಂಟರ್ನ್ಯಾಶನಲ್ ಅಟೋಮಿಕ್ ಎನರ್ಜಿ ಏಜೆನ್ಸಿಯಾಗಿ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.
ನರೇಂದ್ರ ಮೋದಿ ಜೊತೆಗೆ ಸೈಯದ್ ಅಕ್ಬರುದ್ದೀನ್.. 2012ರಿಂದ 2015ರವರೆಗೆ ಭಾರತೀಯ ವಿದೇಶಾಂಗ ಇಲಾಖೆಯ ಅಧಿಕೃತ ಭಾಷಣಕಾರರಾಗಿದ್ದರು. ಅಕ್ಟೋಬರ್ 2015ರಲ್ಲಿ ಭಾರತ-ಆಫ್ರಿಕಾ ಸಮಿತಿಯ ಮುಖ್ಯ ಸಂಯೋಜಕನಾಗಿ ಕೆಲಸ ನಿರ್ವಹಿಸಿದ್ದರು. 2015ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದರು.
ಇವರ ಈ ಎಲ್ಲಾ ಜವಾಬ್ದಾರಿಗಳ ಸಮರ್ಥ ನಿರ್ವಹಣೆಯಿಂದ ಇವರಿಗೆ ಉನ್ನತ ಹಾಗೂ ಖಾಯಂ ಜವಾಬ್ದಾರಿಯನ್ನ ನೀಡೋದು ಅನಿವಾರ್ಯವಾಗಿತ್ತು. ಹೀಗಾಗಿ ಇಷ್ಟೆಲ್ಲಾ ಸೇವೆ ಸಲ್ಲಿಸಿರೋ ಸೈಯದ್ ಅಕ್ಬರುದ್ದೀನ್, 2016ರಿಂದ ಭಾರತದ ಶಾಶ್ವತ ಪ್ರತಿನಿಧಿಯಾಗಿ ಯುಎನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.