ನವದೆಹಲಿ:ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಪ್ರತ್ಯೇಕವಾಗಿ ಗಲ್ಲಿಗೇರಿಸುವಂತೆ ನಿರ್ದೇಶನ ಕೋರಿ ಗೃಹ ಸಚಿವಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 5 ಕ್ಕೆ ಮುಂದೂಡಿದೆ.
ನಿರ್ಭಯ ಪ್ರಕರಣ: ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ಅರ್ಜಿ ವಿಚಾರಣೆ ಮಾ.5 ಕ್ಕೆ ಮುಂದೂಡಿಕೆ
ನಿರ್ಭಯ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಕೋರ್ಟ್ ಮಾರ್ಚ್ 5 ಕ್ಕೆ ಮುಂದೂಡಿದೆ.
ಮಾರ್ಚ್ 3ರಂದು ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಫೈನಲ್ ಆಗಿದ್ದು, ಇದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಜೈಲಿನಲ್ಲಿ ತಲೆ ಚಚ್ಚಿಕೊಂಡು ವಿನಯ್ ಗಾಯ ಮಾಡಿಕೊಂಡಿದ್ದ. ಇದಾದ ಬಳಿಕ ಆತನಿಗೆ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಉನ್ನತ ಮಟ್ಟದ ಚಿಕಿತ್ಸೆ ಕೊಡಿಸುವಂತೆ ಕೋರಿ ಆತ ಕೋರ್ಟ್ ಮೆಟ್ಟಿಲೇರಿದ್ದ. ಹೀಗೆ ಪ್ರತೀ ಬಾರಿ ಅಪರಾಧಿಗಳು ಗಲ್ಲು ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.
ಸದ್ಯ ಎಲ್ಲರಿಗೂ ಒಂದೇ ಬಾರಿ ಗಲ್ಲಿಗೇರಿಸುವ ಬದಲು ಪ್ರತ್ಯೇಕವಾಗಿ ಗಲ್ಲು ಶಿಕ್ಷೆ ವಿಧಿಸುವಂತೆ ಗೃಹ ಸಚಿವಾಲಯ ಅರ್ಜಿ ಸಲ್ಲಿಸಿದ್ದು, ಸದ್ಯ ಇದರ ವಿಚಾರಣೆ ಮಾರ್ಚ್ 5 ಕ್ಕೆ ಮುಂದೂಡಿಕೆಯಾಗಿದೆ.