ಕರ್ನಾಟಕ

karnataka

ETV Bharat / bharat

ಐಸಿಸ್​​ ಉಗ್ರನ ಮನೆಯಲ್ಲಿತ್ತು ಆತ್ಮಾಹುತಿ ದಾಳಿಗೆ ಬಳಸುವ ಸ್ಫೋಟಕ ಜಾಕೆಟ್..!

ಐಸಿಸ್ ಉಗ್ರ ಅಬು ಯೂಸುಫ್​ನ ಮನೆಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆತ್ಮಾಹುತಿ ಬಾಂಬ್​ ದಾಳಿಗಾಗಿ ತಯಾರಿಸಿದ್ದ ಜಾಕೆಟ್​ ಸೇರಿದಂತೆ ಭಾರೀ ಪ್ರಮಾಣದ ಸ್ಫೋಟಕಗಳು ದೊರೆತಿವೆ.

ISIS operative
ಸ್ಫೋಟಕ

By

Published : Aug 23, 2020, 2:06 PM IST

ಬಲರಾಂಪುರ (ಉತ್ತರ ಪ್ರದೇಶ): ದೆಹಲಿಯಲ್ಲಿ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್​ನ ಸ್ವಗ್ರಾಮದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಬಾದ್ಯಾ ಭೈಸಾಹಿ ಗ್ರಾಮದಲ್ಲಿರುವ ಯೂಸುಫ್​ನ ಮನೆಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆತ್ಮಾಹುತಿ ಬಾಂಬ್​ ದಾಳಿಗಾಗಿ ತಯಾರಿಸಿದ್ದ ಜಾಕೆಟ್​ ಸೇರಿದಂತೆ ಸ್ಫೋಟಕಗಳು ದೊರೆತಿವೆ. ಯೂಸುಫ್​ ತಂದೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಐಸಿಸ್​​ ಉಗ್ರನ ಮನೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆ

ನಿನ್ನೆ ದೆಹಲಿಯ ರಿಡ್ಜ್ ರಸ್ತೆಯ ಧೌಲಾ ಕುವಾನ್ ಪ್ರದೇಶದಲ್ಲಿ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಅಬು ಯೂಸುಫ್​ನನ್ನು ಬಂಧಿಸಿ, ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ವಸ್ತುಗಳನ್ನು (ಐಇಡಿ) ವಶಪಡಿಸಿಕೊಂಡಿದ್ದರು. ಬಳಿಕ ಐಇಡಿಗಳನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ನಿಷ್ಕ್ರಿಯಗೊಳಿಸಿದ್ದರು.

ವಿಚಾರಣೆ ವೇಳೆ ಆತ ಕೆಲವು ತಿಂಗಳ ಹಿಂದೆ ತನ್ನ ಗ್ರಾಮದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತೀಕಾರವಾಗಿ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿರುವುದನ್ನು ಬಹಿರಂಗಪಡಿಸಿದ್ದಾನೆ. ಈ ಹಿನ್ನೆಲೆ ಯೂಸುಫ್​ನನ್ನು ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮಕ್ಕೆ ಕರೆತಂದ ದೆಹಲಿ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದರು.

ABOUT THE AUTHOR

...view details