ಕರ್ನಾಟಕ

karnataka

ETV Bharat / bharat

ತಾಜ್ ಮಹಲ್ ಹಾಗೂ ಇತರ ಐತಿಹಾಸಿಕ ತಾಣಗಳಿಗೆ ಹಾನಿ!

ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಆಗ್ರಾ ಕೋಟೆ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಐತಿಹಾಸಿಕ ತಾಣಗಳಿಗೆ ಹಾನಿಯಾಗಿದೆ.

taj
taj

By

Published : May 30, 2020, 1:37 PM IST

ಆಗ್ರಾ (ಉ.ಪ್ರ.): ನಗರದಲ್ಲಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸಿರುವುದರಿಂದ ತಾಜ್‌ ಮಹಲ್‌ನ ರಾಯಲ್ ಗೇಟ್​ಗೆ ಹಾನಿಯಾಗಿದೆ.

ಐತಿಹಾಸಿಕ ತಾಣಗಳಿಗೆ ಹಾನಿ

ತಾಜ್ ಮಹಲ್, ಫತೇಪುರ್ ಸಿಕ್ರಿ ಮತ್ತು ಆಗ್ರಾ ಕೋಟೆ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಐತಿಹಾಸಿಕ ತಾಣಗಳು ಜಿಲ್ಲೆಯಲ್ಲಿ ಬೀಸಿದ ಅನಿರೀಕ್ಷಿತ ಗುಡುಗು ಸಹಿತ ಗಾಳಿಯಿಂದಾಗಿ ಹಾನಿಗೊಳಗಾಗಿವೆ.

ಐತಿಹಾಸಿಕ ತಾಣಗಳಿಗೆ ಹಾನಿ

ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ಹೆಣ್ಣು ಮಗು ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹಲವಾರು ಭಾಗಗಳಲ್ಲಿ ಸುಮಾರು 50 ನಿಮಿಷಗಳ ಕಾಲ ಬಿರುಗಾಳಿ ಬೀಸಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.

ABOUT THE AUTHOR

...view details