ಕರ್ನಾಟಕ

karnataka

ETV Bharat / bharat

ಶ್ರೀಶೈಲಂ ಪವರ್​ ಸ್ಟೇಷನ್​​ ಅಗ್ನಿ ಅವಘಡದಲ್ಲಿ 9 ಮಂದಿ ಸಾವು, ಪರಿಹಾರ ಘೋಷಣೆ

ತೆಲಂಗಾಣ-ಆಂಧ್ರಪ್ರದೇಶ ಗಡಿಭಾಗದಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಜಲವಿದ್ಯುತ್ ಕೇಂದ್ರದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತೆಲಂಗಾಣ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ.

Srisailam Power Plant
Srisailam Power Plant

By

Published : Aug 21, 2020, 8:23 PM IST

ಶ್ರೀಶೈಲಂ:ತೆಲಂಗಾಣದ ಪವರ್​​ ಸ್ಟೇಷನ್​​ನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ ಐವರು ಇಂಜಿನಿಯರ್​,ಇಬ್ಬರು ತಂತ್ರಜ್ಞರು ಸೇರಿ ಒಟ್ಟು 9 ಮಂದಿ ದುರ್ಮರಣಕ್ಕೀಡಾಗಿದ್ದು, ಇದೀಗ ಮುಖ್ಯಮಂತ್ರಿ ಪರಿಹಾರ ಘೋಷಣೆ ಮಾಡಿದ್ದಾರೆ.

ಜಲವಿದ್ಯುತ್​ ಕೇಂದ್ರದ ನಾಲ್ಕನೇ ಘಟಕದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯ ಕುರಿತು ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಶ್ರೀಶೈಲಂ ಅಗ್ನಿ ಅವಘಡ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಪರಿಹಾರ ಘೋಷಣೆ:

ಘಟನೆಯಲ್ಲಿ ಮೃತಪಟ್ಟ ಡೆಪ್ಯೂಟಿ ಇಂಜಿನಿಯರ್​​​​ ಶ್ರೀನಿವಾಸ್​ ಗೌಡ ಕುಟುಂಬಕ್ಕೆ 50 ಲಕ್ಷ ರೂ. ಹಾಗೂ ಉಳಿದ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಇದರ ಜತೆಗೆ ಮೃತರ ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ಸಿಎಂ ನೀಡಿದ್ದಾರೆ.

ABOUT THE AUTHOR

...view details