ನವದೆಹಲಿ :ವಿಶ್ವದಾದ್ಯಂತ ಕೊರೊನಾ ಮಹಾಮಾರಿ ತಲ್ಲಣ ಹುಟ್ಟಿಸಿದೆ. ಈ ಹಿನ್ನೆಲೆ ಭಾರತ ವಿಶ್ವದ ಹಲವು ದೇಶಗಳಿಗೆ ತನ್ನ ಸಹಾಯ ಹಸ್ತ ಚಾಚಿದ್ದು, ಅಗತ್ಯ ವೈದ್ಯಕೀಯ ನೆರವು ನೀಡುತ್ತಿದೆ. ಇದೀಗ ಕೋಲ್ಕತಾ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ನ ವಿಮಾನ ಸುಮಾರು 17 ಟನ್ ವೈದ್ಯಕೀಯ ಸಾಮಾಗ್ರಿಗಳನ್ನು ಮೊದಲ ಬಾರಿಗೆ ಪಿಲಿಫೈನ್ಸ್ನ ಸಿಬುಗೆ ಹೊತ್ತು ಸಾಗಿದೆ.
17 ಟನ್ ವೈದ್ಯಕೀಯ ಸಾಮಾಗ್ರಿಯೊಂದಿಗೆ ಪಿಲಿಫೈನ್ಸ್ಗೆ ಹಾರಿದ ಸ್ಪೈಸ್ ಜೆಟ್ ವಿಮಾನ
ಈವರೆಗೆ ಸ್ಪೈಸ್ಜೆಟ್ ತನ್ನ 950ಕ್ಕೂ ಹೆಚ್ಚು ವಿಮಾನಗಳಲ್ಲಿ ಸುಮಾರು 6,750 ಟನ್ನಷ್ಟು ಸರಕುಗಳನ್ನು ಸಾಗಿಸಿದೆ. ಇದರಲ್ಲಿ ಸುಮಾರು 350 ವಿಮಾನಗಳು ಅಂತಾರಾಷ್ಟ್ರೀಯ ಹಾರಾಟ ನಡೆಸಿವೆ ಎಂದಿದ್ದಾರೆ. ಭಾರತದಲ್ಲಿ ನಾಗರಿಕ ವಿಮಾನ ಸೇವೆಯನ್ನು ಮೇ 17ರವರೆಗೆ ನಿಷೇಧಿಸಲಾಗಿದೆ.
ಇಂದು ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ನ ಬೋಯಿಂಗ್-737 ಸರಕು ವಿಮಾನವನ್ನು ಸಿಬುಗೆ ತೆರಳಲು ಅನುವು ಮಾಡಿಕೊಡಲಾಯಿತು. ಈ ಕುರಿತು ಸ್ಪೈಸ್ ಜೆಟ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಮಾತನಾಡಿ, ಇಂದು ನಾವು 64 ಸರಕು ವಿಮಾನ ಸೇವೆ ಹೊಂದಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ಸೇವೆಗಳೂ ಸಹ ಸೇರಿದೆ. ಅಲ್ಲದೆ ಭಾರತ ಮತ್ತು ಇತರೆ ದೇಶಗಳೊಂದಿಗೆ ವ್ಯಾಪಾರ ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ಇದಲ್ಲದೆ ಈವರೆಗೆ ಸ್ಪೈಸ್ಜೆಟ್ ತನ್ನ 950ಕ್ಕೂ ಹೆಚ್ಚು ವಿಮಾನಗಳಲ್ಲಿ ಸುಮಾರು 6,750 ಟನ್ನಷ್ಟು ಸರಕುಗಳನ್ನು ಸಾಗಿಸಿದೆ. ಇದರಲ್ಲಿ ಸುಮಾರು 350 ವಿಮಾನಗಳು ಅಂತಾರಾಷ್ಟ್ರೀಯ ಹಾರಾಟ ನಡೆಸಿವೆ ಎಂದಿದ್ದಾರೆ. ಭಾರತದಲ್ಲಿ ನಾಗರಿಕ ವಿಮಾನ ಸೇವೆಯನ್ನು ಮೇ 17ರವರೆಗೆ ನಿಷೇಧಿಸಲಾಗಿದೆ. ಆದರೆ, ಅಗತ್ಯ ಸರಕು ಸೇವೆಗಾಗಿ ಹಾಗೂ ಪ್ರಯಾಣಿಕರ ಸ್ಥಳಾಂತರಕ್ಕಾಗಿ ಕೆಲವು ಮಾರ್ಗಗಳಲ್ಲಿ ವಿಮಾನಯಾನ ಸೇವೆಗೆ ಸರ್ಕಾರ ಅನುಮತಿ ನೀಡಿದೆ.