ನವದೆಹಲಿ:ಸಂಸತ್ತಿನ ನೂತನ ಕಟ್ಟಡವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಹೊಸ ಭಾಷ್ಯ ಬರೆಯಲು ಮುಂದಾಗಿದೆ. 2022ಕ್ಕೆ ನೂತನ ಸಂಸತ್ನ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈಗ ಇರುವ ಸಂಸತ್ ಭವನ ನಾಲ್ಕು ಅಂತಸ್ತುಗಳಲ್ಲಿ ನಿರ್ಮಾಣವಾಗಲಿದ್ದು, ಸುಮಾರು 64,500 ಚದರ ಮೀಟರ್ನಲ್ಲಿ ತಲೆ ಎತ್ತಲಿದೆ. ಈ ನೂತನ ಭವನದ ಕೆಳ ಅಂತಸ್ತಿನಲ್ಲಿ ಲೋಕಸಭಾ ಹಾಲ್ ಇರಲಿದ್ದು, ಮುಂದಿನ ವರ್ಷಗಳಲ್ಲಿ ಹೆಚ್ಚಾಗಬಹುದಾದ ಸಂಸದರನ್ನು ಗಣನೆಗೆ ತೆಗೆದುಕೊಂಡು ನಿರ್ಮಿಸಲಾಗುತ್ತದೆ.
ಈಗ ಸದ್ಯಕ್ಕೆ ಲೋಕಸಭೆಯಲ್ಲಿ 545 ಸದಸ್ಯರಿಗೆ ಅವಕಾಶವಿದ್ದು, ನೂತನ ಸಂಸತ್ನಲ್ಲಿ 888 ಮಂದಿಗೆ ಆಸನಗಳನ್ನು ಕಲ್ಪಿಸಲಾಗುತ್ತದೆ. ಅಂದರೆ ಈಗಿನ ಲೋಕಸಭೆಯಲ್ಲಿರುವ ಸದಸ್ಯರಿಗಿಂತ 336 ಮಂದಿ ಹೆಚ್ಚು ಸದದ್ಯರಿಗೆ ಆಸನ ವ್ಯವಸ್ಥೆ ಇರಲಿದೆ.
ಅದೇ ರೀತಿಯಲ್ಲಿ ರಾಜ್ಯಸಭೆಯಲ್ಲಿ ಈಗ 245 ಮಂದಿ ಸದಸ್ಯರಿದ್ದು, ನೂತನ ಸಂಸತ್ ಭವನದ ರಾಜ್ಯಸಭಾ ಸಭಾಂಗಣದಲ್ಲಿ 384 ಮಂದಿಗೆ ಅವಕಾಶವಿರಲಿದೆ. ಆಸನ ವ್ಯವಸ್ಥೆಯಲ್ಲಿ ಅಷ್ಟೇನೂ ಬದಲಾವಣೆಯಾಗುವುದಿಲ್ಲ ಎಂದು ಹೇಳಲಾಗುತ್ತಿದ್ದು, ಚರ್ಚೆಗೆ ಫ್ಯಾನ್ ಆಕಾರದಲ್ಲಿ ಮೇಜುಗಳನ್ನು ಜೋಡಿಸಲಾಗುತ್ತದೆ. ಸಂಸತ್ನ ಎರಡೂ ಸದನಗಳ ಸದಸ್ಯರು ತಮಗೆ ಪ್ರತ್ಯೇಕವಾಗಿ ಮುಂಭಾಗದ ಡೆಸ್ಕ್ಗಳನ್ನು ಹೊಂದಿರುತ್ತಾರೆ.