ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೊಸ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ.
ವಿವಾದಿತ ಹೇಳಿಕೆಗಳಿಗಾಗಿಯೇ ಕುಖ್ಯಾತಿ ಪಡೆದಿರುವ ತರೂರ್ ಅವರು ಮೈಕ್ ಹಿಡಿದು ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದಾರೆ.
ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೊಸ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ.
ವಿವಾದಿತ ಹೇಳಿಕೆಗಳಿಗಾಗಿಯೇ ಕುಖ್ಯಾತಿ ಪಡೆದಿರುವ ತರೂರ್ ಅವರು ಮೈಕ್ ಹಿಡಿದು ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದಾರೆ.
ಅಮೇಜಾನ್ ಪ್ರೈಮ್ ವಿಡಿಯೋಸ್ ಒನ್ ಮೈಕ್ ಸ್ಟ್ಯಾಂಡ್ ಹೆಸರಿನ ಸ್ಟ್ಯಾಂಡ್ಅಪ್ ಕಾಮಿಡಿ ಸರಣಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗಣ್ಯಾತಿಗಣ್ಯರು ತಮ್ಮ ಮಾತಿನ ಮೂಲಕ ನಗೆಯ ಚಟಾಕಿ ಹಾರಿಸಿದ್ದಾರೆ.
ನಿನ್ನೆ ನಟಿ ತಾಪ್ಸಿ ಪನ್ನು ಸ್ಟ್ಯಾಂಡ್ಅಪ್ ಕಾಮಿಡಿ ಮಾಡಿದ್ದ ದೃಶ್ಯವನ್ನು ಪ್ರೈಮ್ ವಿಡಿಯೋ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿತ್ತು. ಇದೀಗ ತರೂರ್ ಅವರು ನಗೆಯ ಚಟಾಕಿ ಹಾರಿಸಿರುವ ವಿಡಿಯೋವನ್ನೂ ಕೂಡ ಶೇರ್ ಮಾಡಿದೆ.
ಪ್ರೈಮ್ ವಿಡಿಯೋಸ್ನ ಸ್ಟ್ಯಾಂಡ್ಅಪ್ ಕಾಮಿಡಿಗೆ ಬಹಳಷ್ಟು ಅಭಿಮಾನಿಗಳಿದ್ದು, ಸೆಲಬ್ರಿಟಿಗಳನ್ನು ಕರೆಸಿ ತಮಾಷೆಯಾಗಿ ಮಾತನಾಡಿಸುವ ಹೊ ಪ್ರಯತ್ನಕ್ಕೆ ಕೈ ಹಾಕಿದೆ.