ಲಖನೌ(ಉತ್ತರ ಪ್ರದೇಶ):ಒಂದೇ ಕುಟುಂಬದ 7ಮಂದಿ ಯುವಕರು ನೀರುಪಾಲಾಗಿರುವ ಘಟನೆ, ಉತ್ತರ ಪ್ರದೇಶದ ಶಮಿಲಿ ಜಿಲ್ಲೆಯಲ್ಲಿ ನಡೆದಿದೆ.
ಚಿತಾಭಸ್ಮ ಬಿಡಲು ಹೋದ ಒಂದೇ ಕುಟುಂಬದ 7ಮಂದಿ ನೀರು ಪಾಲು
ಉತ್ತರ ಪ್ರದೇಶದ ಶಮಿಲಿಯಲ್ಲಿ ಕಳೆದ ಭಾನುವಾರ ಒಂದೇ ಕುಟುಂಬದ 7 ಮಂದಿ ಯುವಕರು ಯಮುನಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಪ್ರಾಣ ಬಿಟ್ಟರು
ಈ 7 ಯುವಕರು ತಮ್ಮ ಧಾರ್ಮಿಕ ನಂಬಿಕೆಯಂತೆ ಚಿತಾಭಸ್ಮವನ್ನು ನೀರಿನಲ್ಲಿ ಬಿಡಲು ಬಂದು ನದಿಯಲ್ಲಿ ಸಿಲಿಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮುಳುಗಿರುವ 7ಜನರ ಪೈಕಿ ಮೂವರ ಶವ ದೊರೆತಿದ್ದು, ಉಳಿದ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು, ಅಸಿಸ್ಟಂಟ್ ಎಸ್ಪಿ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
Last Updated : Sep 16, 2019, 10:32 AM IST