ಕರ್ನಾಟಕ

karnataka

ಮೂವರು ಪತ್ನಿಯರು ಕೈಕೊಟ್ಟಿದ್ದಕ್ಕೆ ಬೇಸರ.. 18 ಮಂದಿ ಮಹಿಳೆಯರನ್ನು ಬಲಿ ಪಡೆದ ಸೈಕೋ ಕಿಲ್ಲರ್​!

By

Published : Jan 27, 2021, 2:55 PM IST

ತೆಲಂಗಾಣ​ ಪೊಲೀಸರು ಸರಣಿ ಹಂತಕನನ್ನು ಹೆಡೆಮುರಿ ಕಟ್ಟಿದ್ದಾರೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಸೈಕೋ ಕಿಲ್ಲರ್​ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Slug SERIAL KILLER ARRESTED FOR KILLING 18 WOMEN IN TELANGANA
18 ಹೆಣ್ಣು ಮಕ್ಕಳನ್ನ ಬಲಿ ಪಡೆದ ರಾಕ್ಷಸಡು

ಹೈದರಾಬಾದ್ (ತೆಲಂಗಾಣ): ತನ್ನ ಪತ್ನಿ ಪರ ಪುರುಷನ ಜೊತೆ ಓಡಿ ಹೋದಳು ಎಂಬ ಕಾರಣಕ್ಕೆ ಸೈಕೋವೋರ್ವ 18 ಹೆಣ್ಣು ಮಕ್ಕಳನ್ನು ಬಲಿ ಪಡೆದಿರುವ ಭಯಾನಕ ಪ್ರಕರಣ ತೆಲಂಗಾಣದಲ್ಲಿ ನಡೆದಿದೆ.

ಮೊದಲ ಹೆಂಡತಿ ಪರ ಪುರುಷನ ಸಂಗ ಮಾಡಿ ಓಡಿ ಹೋಗಿದ್ದಳು. ಇದರಿಂದ ಮನನೊಂದು ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ಬರೋಬ್ಬರಿ 18 ಹೆಣ್ಣು ಮಕ್ಕಳನ್ನ ಕೊಲೆ ಮಾಡಿದ್ದಾನೆ. ಈಗ ಈ ಸೈಕೋ ಕಿಲ್ಲರ್ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಮೂಲತಃ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಂಡಿ ಮಂಡಲದ ಅರುತ್ಲಾದ ನಿವಾಸಿಯಾಗಿರುವ ರಾಮು ಬಂಧಿತ ಆರೋಪಿ. ಇವನು 1998 ರಲ್ಲಿ, ತನ್ನ 21ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ತಿಂಗಳಲ್ಲಿ ಇವನ ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಳು. ಇವನ ಮನೆಯ ಸುತ್ತಮುತ್ತಲಿನ ಜನ ಇದೆ ವಿಷಯ ಇಟ್ಟುಕೊಂಡು ಇವನನ್ನ ಆಡಿಕೊಳ್ಳುತ್ತಿದ್ದರು. ಇದರಿಂದ ರಾಮು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮತ್ತೆ ಕೆಲವೇ ತಿಂಗಳಲ್ಲಿ ಎರಡನೇ ಮದುವೆ ಕೂಡಾ ಆಗಿದ್ದ. ಅವಳು ಕೂಡಾ ಅವನನ್ನ ತೊರೆದಿದ್ದಳು. ಇದರಿಂದ ಮತ್ತೆ ವಿಚಲಿತನಾಗಿದ್ದ ರಾಮು ಮೂರನೇ ಮದುವೆಯಾಗಿದ್ದ. ಇವಳು ಇವನಿಗೆ ಕೈ ಕೊಟ್ಟು ಹೋಗಿದ್ದಳು, ಇದರಿಂದ ಬಹಳ ನೊಂದಿದ್ದ ರಾಮು ಮಹಿಳೆಯರ ಮೇಲೆ ದ್ವೇಷ ಭಾವನೆ ಬೆಳೆಸಿಕೊಂಡು ಸೈಕೋ ಆಗಿದ್ದ.

ಓದಿ : ಅಧಿಕಾರಿಗಳ ಜತೆ ಹುಣಸೋಡು ಸ್ಫೋಟ ಪ್ರಕರಣದ ಆರೋಪಿ ಫೋಟೋ ವೈರಲ್.. ಏನಿದರ ರಹಸ್ಯ!?

ಇದಾದ ನಂತರ ಈತ ಒಂಟಿ ಮಹಿಳೆಯರನ್ನು ಟಾರ್ಗೆಟ್​​ ಮಾಡುತ್ತಿದ್ದ. ಒಂಟಿ ಮಹಿಳೆಯರನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ, ಕೊಲೆ ಮಾಡಿ ಪರಾರಿಯಾಗುತ್ತಿದ್ದ. 2003 ರಿಂದ 2009ರ ಹೊತ್ತಿಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಮಹಿಳೆಯರ ಮೇಲೆ ತನ್ನ ರಾಕ್ಷಸಿ ಕೃತ್ಯ ಮೆರೆದಿದ್ದ. ರಂಗಾರೆಡ್ಡಿ ನ್ಯಾಯಾಲಯವು 2011 ರ ಫೆಬ್ರವರಿಯಲ್ಲಿ ರಾಮುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ರಾಮು ಅವರನ್ನು ಚಾರ್ಲಪಲ್ಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು, ಜೈಲಿನ ಅಧಿಕಾರಿಗಳು ಅವರನ್ನು ಉತ್ತಮ ಮಾನಸಿಕ ಸ್ಥಿತಿಯಲ್ಲಿಲ್ಲದ ಕಾರಣ ಅವರನ್ನು ಚಿಕಿತ್ಸೆಗಾಗಿ ಎರ್ರಗಡ್ಡ ಮನೋವೈದ್ಯಕೀಯ ಆಸ್ಪತ್ರೆಗೆ ಕಳುಹಿಸಿದ್ದರು. ಡಿಸೆಂಬರ್ 30, 2011 ರಂದು, ರಾಮು ಮತ್ತು ಇತರ ಐದು ಕೈದಿಗಳು ಎರ್ರಗಡ್ಡ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದರು. ಮತ್ತೆ ಈತ 9 ಮಹಿಳೆಯರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈಗ ಸೈಕೋ ಕೊನೆಗೂ ಪೊಲೀಸರ ಅಥಿತಿಯಾಗಿದ್ದಾನೆ.

ABOUT THE AUTHOR

...view details