ತೆಲಂಗಾಣ/ಹೈದರಾಬಾದ್:ಎಲ್ಲರೂ ತಮ್ಮ ಕಾರು, ಬೈಕುಗಳಿಗೆ ಸಾರಿಗೆ ಇಲಾಖೆಯಿಂದ ನೀಡಲಾದ ರಿಜಿಸ್ಟರ್ ನಂಬರ್ ಅಳವಡಿಸಿಕೊಂಡಿದ್ದರೆ, ಇಲ್ಲೊಬ್ಬ ಭೂಪ ತನ್ನ ಕಾರಿನ ನಂಬರ್ ಪ್ಲೇಟ್ನಲ್ಲಿ 'ಎಪಿ ಸಿಎಂ ಜಗನ್' (AP CM JAGAN) ಎಂದು ಬರೆಸಿಕೊಂಡಿದ್ದಾನೆ.
ನಂಬರ್ ಪ್ಲೇಟ್ನಲ್ಲಿ ಸಂಖ್ಯೆ ಬದಲು ಆಂಧ್ರ ಸಿಎಂ ಜಗನ್ ಹೆಸರು... ಕಾರು ಮಾಲೀಕ ಹೀಗೆ ಮಾಡಿದ್ಯಾಕೆ?
ಹೈದರಾಬಾದ್ ನ ಯುವಕನೋರ್ವ ಟೋಲ್ ಶುಲ್ಕ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾರಿನ ನಂಬರ್ ಪ್ಲೇಟ್ಮೇಲೆ ನಂಬರ್ ಬದಲು ಬೇರೇನೆ ಬರೆದಿದ್ದ.
'ಎಪಿ ಸಿಎಂ ಜಗನ್
ಈ ಕಾರಿನ ಮಾಲಿಕ ಹೈದರಾಬಾದ್ನ ಕುಕ್ಕಟಪಲ್ಲಿ ನಿವಾಸಿ ಹರಿ ರಾಜೇಶ್. ಈತ ಟೋಲ್ ಶುಲ್ಕ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ರೀತಿ ಬರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಜೀದಿಮೆತ್ಲಾ ಪೊಲೀಸರು ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.