ಕರ್ನಾಟಕ

karnataka

ETV Bharat / bharat

ಪಶ್ಚಿಮಬಂಗಾಳದಲ್ಲಿ ಸಿಪಿಎಂ ಅಭ್ಯರ್ಥಿ ಕಾರಿನ ಮೇಲೆ ದಾಳಿ.. ರಾಯಗಂಜ್‌ನಲ್ಲಿ ಲಾಠಿಚಾರ್ಜ್‌, ಗಾಳಿಯಲ್ಲಿ ಗುಂಡು!

ಪಶ್ಚಿಮಬಂಗಾಳದ ರಾಯಗಂಜ್​ನಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ

ಪಶ್ಚಿಮಬಂಗಾಳದಲ್ಲಿ ಲಾಠಿಚಾರ್ಜ್‌

By

Published : Apr 18, 2019, 12:29 PM IST

ರಾಯಗಂಜ್‌,(ಪಶ್ಚಿಮಬಂಗಾಳ): ಪಶ್ಚಿಮಬಂಗಾಳದ ರಾಯಗಂಜ್‌ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಉದ್ರಿಕ್ತರನ್ನ ಚದುರಿಸಲು ಪೊಲೀಸರು ಮತ್ತು ಸೈನಿಕರು ಲಾಠಿಚಾರ್ಜ್‌ ಮತ್ತು ಅಶ್ರುವಾಯು ದಾಳಿ ನಡೆಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಲಾಠಿಚಾರ್ಜ್‌

ಪಶ್ಚಿಮಬಂಗಾಳದ ರಾಯಗಂಜ್‌ ಕ್ಷೇತ್ರದಲ್ಲೂ ಇವತ್ತು ಮತದಾನ ನಡೆಯುತ್ತಿದೆ. ಆದರೆ, ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಇದರಿಂದಾಗಿ ಸಿಪಿಎಂ ಅಭ್ಯರ್ಥಿ ಮೊಹ್ಮದ್‌ ಸಲೀಮ್ ಕಾರಿನ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಹೆದ್ದಾರಿ-34ರಲ್ಲಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದರು. ಕೆಲವರು ದಿಗಿರಪಾರ್‌ ಮತಗಟ್ಟೆಯಲ್ಲಿ ತಾವು ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಅಂತಾ ಆರೋಪಿಸಿ ಪ್ರತಿಭಟನೆಗಿಳಿದಿದ್ದರು.

ಪಶ್ಚಿಮಬಂಗಾಳದಲ್ಲಿ ಲಾಠಿಚಾರ್ಜ್‌

ಹೆದ್ದಾರಿ ತಡೆದು ಪ್ರತಿಭಟನೆ ನಡೆಸ್ತಿದ್ದರಿಂದ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದ್ದಂತೆಯೇ ಅರೆಸೇನಾ ಪಡೆ ಮತ್ತು ಪೊಲೀಸರು ಉದ್ರಿಕ್ತರ ಮೇಲೆ ಲಾಠಿಚಾರ್ಜ್‌ ನಡೆಸಿದ್ದರು.

ಪಶ್ಚಿಮಬಂಗಾಳದಲ್ಲಿ ಲಾಠಿಚಾರ್ಜ್‌

ಉದ್ರಿಕ್ತರನ್ನ ಸ್ಥಳದಿಂದ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಸದ್ಯ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿಯಿದೆ. ಲಾಠಿಚಾರ್ಜ್‌ ನಡೆದಿರುವುದರಿಂದ ಮತಗಟ್ಟೆ ಕೇಂದ್ರದಲ್ಲಿ ವಿರಳಾತಿ ವಿರಳ ಮತದಾರು ಕಾಣಿಸಿದರು.

ABOUT THE AUTHOR

...view details