ಕರ್ನಾಟಕ

karnataka

ETV Bharat / bharat

ಉದ್ಯೋಗಿಗಳಿಗೆ ಲಾಕ್​ಡೌನ್ ಸಮಯದ ಪೂರ್ಣ ವೇತನ ಪಾವತಿ ವಿಚಾರ: ಇಂದು ಸುಪ್ರೀಂ ತೀರ್ಪು - coronavirus lockdown

ಲಾಕ್​ಡೌನ್ ಸಮಯದಲ್ಲಿ ನೌಕರರು ಮತ್ತು ಕಾರ್ಮಿಕರ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡಲು ಪೂರ್ಣ ವೇತನ ನೀಡಲು ಕೇಂದ್ರವು ಮಾರ್ಚ್ 29ರಂದು ತಾತ್ಕಾಲಿಕ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಖಾಸಗಿ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಕುರಿತಂತೆ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.

SC verdict
ಸುಪ್ರೀಂಕೋರ್ಟ್

By

Published : Jun 12, 2020, 5:03 AM IST

ನವದೆಹಲಿ:ಕೋವಿಡ್​-19 ಲಾಕ್‌ಡೌನ್‌ನ 54 ದಿನಗಳ ಅವಧಿಯಲ್ಲಿ ಉದ್ಯೋಗಿಗಳಿಗೆ ಪೂರ್ಣ ವೇತನ ನೀಡುವಂತೆ ತಿಳಿಸಿದ್ದ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಹಲವಾರು ಖಾಸಗಿ ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ಕುರಿತಾದ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.

ಲಾಕ್​ಡೌನ್ ಸಮಯದಲ್ಲಿ ನೌಕರರು ಮತ್ತು ಕಾರ್ಮಿಕರ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡಲು ಪೂರ್ಣ ವೇತನ ನೀಡುವಂತೆ ಕೇಂದ್ರವು ಮಾರ್ಚ್ 29ರಂದು ತಾತ್ಕಾಲಿಕ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಖಾಸಗಿ ಕಂಪನಿಗಳು ಅರ್ಜಿ ಸಲ್ಲಿಸಿದ್ದವು.

ಈ ಹಿಂದೆ ಜೂನ್ 4ರಂದು ಅರ್ಜಿಗಳ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ್ದ ಸುಪ್ರೀಂಕೋರ್ಟ್​​ ತೀರ್ಪನ್ನು ಜೂನ್​ 12ರಂದು ಅಂದರೆ ಇಂದಿಗೆ ಕಾಯ್ದಿರಿಸಿತ್ತು. ಅಲ್ಲದೆ ಜೂನ್​ 12ರವರೆಗೆ ಲಾಕ್​ಡೌನ್ ಸಮಯದಲ್ಲಿ ಪೂರ್ಣ ವೇತನ ಪಾವತಿಸದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ನ್ಯಾಯಮೂರ್ತಿ ಎಂ.ಆರ್. ಶಾ ಅವರ ಪೀಠವು ಲಾಕ್​ಡೌನ್ ಸಮಯದಲ್ಲಿ ಸಂಪೂರ್ಣ ವೇತನವನ್ನು ನೀಡದ ಕಾರಣ ಕಂಪನಿ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಕೇಂದ್ರಕ್ಕೆ ಈ ಹಿಂದೆ ಆದೇಶಿಸಿತ್ತು. ಅದೇ ಆದೇಶವನ್ನು ಜೂನ್​ 12ರವರೆಗೆ ವಿಸ್ತರಿಸಿತ್ತು.

ABOUT THE AUTHOR

...view details