ಕರ್ನಾಟಕ

karnataka

ETV Bharat / bharat

ಮೈತ್ರಿ ಸರ್ಕಾರದ ಉಳಿವು, ಅತೃಪ್ತರ ಭವಿಷ್ಯ.. ಸುಪ್ರೀಂ ತೀರ್ಪಿನತ್ತ ನಾಡಿನ ಚಿತ್ತ! - undefined

ಮುಖ್ಯ ನ್ಯಾಯಮಮೂರ್ತಿ ರಂಜನ್​ ಗೊಗೊಯ್​​, ಜಸ್ಟೀಸ್​ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ನೇತೃತ್ವದ ತ್ರಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿದ್ದ ಬಳಿಕ ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ.

ಸುಪ್ರೀಂ

By

Published : Jul 17, 2019, 2:36 AM IST

Updated : Jul 17, 2019, 3:20 AM IST

ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಉಂಟಾಗಿರುವ ಅಸ್ಥಿರತೆ ಕೊನೆಯ ಹಂತಕ್ಕೆ ಬಂದಿದ್ದು, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದ ತೀರ್ಪು ಇಂದು ಬೆಳಗ್ಗೆ 10.30ಕ್ಕೆ ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​​, ಜಸ್ಟೀಸ್​ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ನೇತೃತ್ವದ ತ್ರಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿದ್ದ ಬಳಿಕ ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ.

ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಹೀಗಿತ್ತು ಸುದೀರ್ಘ ವಾದ-ಪ್ರತಿವಾದ!

15 ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರೆ, ಸಿಎಂ ಕುಮಾರಸ್ವಾಮಿ ಪರವಾಗಿ ರಾಜೀವ್ ಧವನ್ ಹಾಗೂ ಸ್ಪೀಕರ್ ರಮೇಶ್ ಕುಮಾರ್​ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮುಂದಿಟ್ಟಿದ್ದಾರೆ.

ಕರ್ನಾಟಕ ಮೈತ್ರಿ ಸರ್ಕಾರದ ಉಳಿವು, ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಇಂದಿನ ಸುಪ್ರೀಂ ಕೋರ್ಟ್​ ಆದೇಶದ ಮೇಲೆ ನಿಂತಿದೆ. ಇವೆಲ್ಲದರ ಜೊತೆಗೆ ಭವಿಷ್ಯದ ರಾಜಕೀಯದ ಮೇಲೂ ಸರ್ವೋಚ್ಛ ನ್ಯಾಯಾಲಯದ ತೀರ್ಪು ಮಹತ್ವದ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

Last Updated : Jul 17, 2019, 3:20 AM IST

For All Latest Updates

TAGGED:

ABOUT THE AUTHOR

...view details