ನವದೆಹಲಿ:ರಾಜಕೀಯ ವಿಡಂಬನಾತ್ಮಕ ಚಿತ್ರವೆಂದು 'ಭೋಬಿಶಯೋತರ್ ಭೂತ್' ಪ್ರದರ್ಶನದ ಮೇಲೆ ನಿಷೇಧ ಹೇರಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ, ಸುಪ್ರೀಂಕೋರ್ಟ್ ₹ 20 ಲಕ್ಷ ರೂ ದಂಡ ಪಾವತಿಸುವಂತೆ ಆದೇಶಿದೆ.
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು, ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯ ಮೇಲೆ ನಿರ್ಮಾಪಕರು ಹಾಗೂ ಚಿತ್ರ ಮಂದಿರ ಮಾಲೀಕರಿಗೆ ಪರಿಹಾರ ಮೊತ್ತವಾಗಿ ₹ 20 ಲಕ್ಷ ನೀಡುವಂತೆ ಮಮತಾ ಸರ್ಕಾರಕ್ಕೆ ಸೂಚಿಸಿದೆ.