ಕರ್ನಾಟಕ

karnataka

ETV Bharat / bharat

ಜಗನ್​ ಮತ್ತೊಂದು ನಿರ್ಧಾರ... ನಿರುದ್ಯೋಗಿ ಯುವಕರಿಗೆ ಮರಳು ರವಾನೆ ಕಾಂಟ್ರಾಕ್ಟ್​: ದಸರಾ ಬಂಪರ್ ಗಿಫ್ಟ್!

ಪ್ರತೀ ಜಿಲ್ಲೆಯ 2 ಸಾವಿರ ನಿರುದ್ಯೋಗಿ ಯುವಕರಿಗೆ ಮರಳು ರವಾನೆ ಕಾಂಟ್ರಾಕ್ಟ್​ ನೀಡಬೇಕೆಂದು ಆಂಧ್ರ ಸಿಎಂ ಜಗನ್ ಆದೇಶಿಸಿದ್ದಾರೆ.

ಆಂಧ್ರ ಸಿಎಂ ಜಗನ್

By

Published : Oct 2, 2019, 2:19 PM IST

ಅಮರಾವತಿ:ಆಂಧ್ರಪ್ರದೇಶದ ಪ್ರತೀ ಜಿಲ್ಲೆಯಲ್ಲಿರುವ 2 ಸಾವಿರ ನಿರುದ್ಯೋಗಿ ಎಸ್​​ಸಿ, ಎಸ್​ಟಿ, ಒಬಿಸಿ ಯುವಕರನ್ನ ಆಯ್ಕೆ ಮಾಡಿ ಮರಳು ರವಾನೆ ಕಾಂಟ್ರಾಕ್ಟ್​ ನೀಡುವಂತೆ ಮುಖ್ಯಮಂತ್ರಿ ಜಗನ್ ​ಮೋಹನ್ ಆದೇಶಿಸಿದ್ದಾರೆ.

ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಎಸ್​ಪಿಗಳೊಂದಿಗೆ ಸಭೆ ನಡೆಸಿದ ಸಿಎಂ ಜಗನ್ ಮೋಹನ್ ರೆಡ್ಡಿ, ಮರಳು ಕೊರತೆ ತಡೆಗಟ್ಟಲು ಆದೇಶ ಹೊರಡಿಸಲಾಗಿದ್ದು, ಆಯ್ಕೆಯಾದ ಯುವಕರಿಗೆ ವಾಹನಗಳ ಖರೀದಿಗೆ ಆಯಾ ಸಂಸ್ಥೆಗಳಿಂದ ಸಾಲ ಪಡೆಯುವಂತೆ ಸೂಚಿಸಲಾಗಿದೆ. ಈ ಕುರಿತು ತಕ್ಷಣದ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಎಂದು ಆದೇಶಿಸಿದ್ದಾರೆ.

ಜಗನ್ ಸರ್ಕಾರದ ನಿರ್ಧಾರಗಳೇನು:

  • ಜಿಲ್ಲೆಗಳಲ್ಲಿ ಮರಳು ಸರಬರಾಜು ಮತ್ತು ಸಾಗಣೆ ಮೇಲ್ವಿಚಾರಣೆಯನ್ನು ಜೆಸಿ ಮಟ್ಟದ ಅಧಿಕಾರಿಗೆ ವಹಿಸಬೇಕು. ಅಧಿಕಾರಿ ಕೇವಲ ಆ ಜವಾಬ್ದಾರಿಗಳನ್ನು ಮಾತ್ರ ನಿರ್ವಹಿಸಬೇಕು.
  • ಸರ್ಕಾರ ನಿಗದಿಪಡಿಸಿದ 4.90 ರೂಪಾಯಿ ದರದಲ್ಲಿ ಮರಳು ಸಾಗಣೆ ಮಾಡಲು ಮುಂದೆ ಬರುವವರು ತಮ್ಮ ವಾಹನಗಳನ್ನ ಬಳಸಬೇಕು.
  • ರಾಜ್ಯದಲ್ಲಿನ ಎಲ್ಲ ಮರಳು ಸಂಗ್ರಹ ಸ್ಥಳಗಳು ಕಾರ್ಯ ನಿರ್ವಹಿಸಬೇಕು. ಪ್ರವಾಹ ಕಡಿಮೆಯಾಗಿ ಮರಳಿನ ಲಭ್ಯತೆ ಹೆಚ್ಚಾದಾಗ ಕಡಿಮೆ ದರದಲ್ಲಿ ಮರಳು ಒದಗಿಸಬೇಕು. ಮುಂದಿನ 60 ದಿನಗಳಲ್ಲಿ ಬದಲಾವಣೆ ಆಗಲೇ ಬೇಕು ಎಂದಿದ್ದಾರೆ.
  • ಮರಳು ಅಕ್ರಮ ಸಾಗಣೆ ಮೇಲೆ ಜಿಲ್ಲಾಧಿಕಾರಿ ಮತ್ತು ಪೊಲೀಸ್​ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರಬೇಕು.
  • ಮರಳು ಮಾಫಿಯಾದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಕೂಡದು. ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಈ ವಿಚಾರದಲ್ಲಿ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ವ್ಯತ್ಯಾಸ ಜನರಿಗೆ ಸ್ಪಷ್ಟವಾಗಿ ಗೊತ್ತಾಗಬೇಕು.

ABOUT THE AUTHOR

...view details