ಕರ್ನಾಟಕ

karnataka

ETV Bharat / bharat

ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಿ: ಸಚಿನ್ ಪೈಲಟ್

ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಪತ್ರ ಬರೆದಿದ್ದು, ಪ್ರಸ್ತುತ ಪ್ರತಿ ಕುಟುಂಬಕ್ಕೆ 100 ದಿನಗಳವರೆಗೆ ಇರುವ ಉದ್ಯೋಗದ ದಿನಗಳನ್ನು 200 ದಿನಗಳವರೆಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

dcm
dcm

By

Published : Apr 27, 2020, 11:37 AM IST

ಜೈಪುರ (ರಾಜಸ್ಥಾನ):ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ರಾಜ್ಯದ 1.13 ಕೋಟಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200ಕ್ಕೆ ಏರಿಸಬೆಕೆಂದು ಒತ್ತಾಯಿಸಿ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಪತ್ರ ಬರೆದಿದ್ದಾರೆ.

ಈ ಕಾಯ್ದೆಯ ಪ್ರಕಾರ ಪ್ರಸ್ತುತ ಪ್ರತಿ ಕುಟುಂಬಕ್ಕೆ 100 ದಿನಗಳವರೆಗೆ ಇರುವ ಉದ್ಯೋಗದ ದಿನಗಳನ್ನು 200 ದಿನಗಳವರೆಗೆ ಹೆಚ್ಚಿಸಬೇಕೆಂದು ಪೈಲಟ್‌ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

"ಲಾಕ್​ ಡೌನ್​ನಿಂದಾಗಿ ದಿನಗೂಲಿ ನೌಕರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ, 2020-21ರಲ್ಲಿ ಹಣಕಾಸಿನ ನೆರವು ನೀಡುವ ಸಲುವಾಗಿ, ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ನಿಗದಿಪಡಿಸಿದ 100 ದಿನಗಳ ಉದ್ಯೋಗವನ್ನು ಪ್ರತಿ ಕುಟುಂಬಕ್ಕೆ 200 ದಿನಗಳಿಗೆ ಹೆಚ್ಚಿಸಬೇಕು" ಎಂದು ಪೈಲಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details