ಕರ್ನಾಟಕ

karnataka

By

Published : Dec 26, 2020, 7:09 AM IST

Updated : Dec 26, 2020, 8:58 AM IST

ETV Bharat / bharat

ಕೋವಿಡ್ -19 ಎಫೆಕ್ಟ್ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆ

ಪ್ರತಿ ವರ್ಷ ಈ ಸೀಸನ್​ನಲ್ಲಿ ಅತಿ ಹೆಚ್ಚು ಭಕ್ತರು ಅಯ್ಯಪ್ಪನ ಸನ್ನಿದಾನಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಈ ಬಾರಿ ಕೋವಿಡ್​​​-19 ಕಾರಣದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 156.60 ಕೋಟಿ ರೂ. ಆದಾಯ ಭಕ್ತರಿಂದ ಹರಿದು ಬಂದಿತ್ತು..

Sabarimala temple
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ

ಪಥನಮತ್ತಟ್ಟ (ಕೇರಳ) :ಕೋವಿಡ್-19 ಲಾಕ್‌ಡೌನ್​​ ಎಫೆಕ್ಟ್​​ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆದಾಯಕ್ಕೂ ತಟ್ಟಿದೆ. ಪ್ರತಿ ವರ್ಷ ಈ ಸೀಸನ್​ನಲ್ಲಿ ಅತಿ ಹೆಚ್ಚು ಭಕ್ತರು ಅಯ್ಯಪ್ಪನ ಸನ್ನಿದಾನಕ್ಕೆ ಭೇಟಿ ನೀಡುತ್ತಿದ್ದರು.

ಆದರೆ, ಈ ಬಾರಿ ಕೋವಿಡ್​​​-19 ಕಾರಣದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 156.60 ಕೋಟಿ ರೂ. ಆದಾಯ ಭಕ್ತರಿಂದ ಹರಿದು ಬಂದಿತ್ತು. ಆದರೆ, ಈ ಬಾರಿ 39 ದಿನಗಳಲ್ಲಿ ಕೇವಲ 9.09 ಕೋಟಿ ರೂ,ಗೆ ಇಳಿದಿದೆ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿ ತಿಳಿಸಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ

ಈ ವರ್ಷ ಈವರೆಗೆ 71,706 ಭಕ್ತರು ಭೇಟಿ ನೀಡಿದ್ದಾರೆ. ಶಬರಿಮಲೆಯ ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಭಾರಿ ಕುಸಿದಿದೆ. ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸರ್ಕಾರದ ಶಿಫಾರಸುಗಳಿಗೆ ಆದ್ಯತೆ ನೀಡಲಾಗಿದೆ ಎಂದರು. ಮಂಡಲ-ಮಕರವಿಲಾಕು ಉತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.

ಓದಿ : ಬಹುದಿನಗಳ ಬಾಳಿಕೆ ಬರುವ ಲ್ಯಾಕ್​ ಬಳೆಗಳು: ಬಣ್ಣ ಬಣ್ಣದ ಅರಗಿನ ಬಳೆಗಳ ಮೋಡಿ ನೋಡಿ..!

Last Updated : Dec 26, 2020, 8:58 AM IST

ABOUT THE AUTHOR

...view details