ಕರ್ನಾಟಕ

karnataka

ETV Bharat / bharat

ಮನೆಯಲ್ಲಿ 'ಲಾಕ್​' ಆದ ಮಾನವರು ... ವಯನಾಡಿನಲ್ಲಿ ಸಾವಿನಿಂದ ಬಚಾವಾದ ಪ್ರಾಣಿಗಳು

ಮನುಷ್ಯರು ಕೊರೊನಾ ನಿಭಾಯಿಸಲು ಲಾಕ್​ಡೌನ್​ ಪರಿಸ್ಥಿತಿಯಲ್ಲಿ ಪರದಾಡುತ್ತಿರುವಾಗ ಕಾಡಿನಲ್ಲಿರುವ ಪ್ರಾಣಿಗಳಿಗೆ ಮಾತ್ರ ಆನಂದವನ್ನು ಉಂಟುಮಾಡಿದೆ. ಕಾಡು ರಸ್ತೆಗಳಲ್ಲಿ ಯಾವುದೇ ವಾಹನಗಳು ಇಲ್ಲದ ಕಾರಣ ಪ್ರಾಣಿಗಳು ಉತ್ಸಾಹದಿಂದಿವೆ. ವಯನಾಡಿನ ಕಾಡಿನ ರಸ್ತೆಗಳಲ್ಲಿ ಕಾಣಸಿಗುವ ಪ್ರಾಣಿಗಳನ್ನು ನೋಡಿದಾಗ ಲಾಕ್​ಡೌನ್​ಗೆ ಧನ್ಯವಾದ ಅರ್ಪಿಸಿದಂತಿದೆ.

Wayanad
ವಯನಾಡ್

By

Published : May 1, 2020, 6:33 PM IST

ವಯನಾಡ್ (ಕೇರಳ):ಹಾ... ಈಗ ಆರಾಮಾಗಿ ನಾವು ಕಾಡು ಸುತ್ತಬಹುದು. ಯಾವುದೇ ವಾಹನದಡಿ ಬಿದ್ದು ಸಾಯೋ ಭಯ ಇಲ್ಲ, ಕರ್ಕಶ ಹಾರ್ನ್​ ಇಲ್ಲ. ಅದ್ಯಾವುದೋ ಕೊರೊನಾ ಅಂತೆ ಅದಕ್ಕಾಗಿ ಲಾಕ್​ಡೌನ್​ ಅಂತೆ... ಏನೋ ನಾವಂತೂ ಇದ್ರಿಂದ ತುಂಬಾ ಸಂತೋಷವಾಗಿರುವುದಂತೂ ನಿಜ.

ವಯನಾಡಿನ ಕಾಡಿನ ರಸ್ತೆಗಳಲ್ಲಿ ಕಾಣಸಿಗುವ ಪ್ರಾಣಿಗಳು

ಹೌದು, ಇಷ್ಟು ದಿನ ಕಾಡಿನೊಳಗೆ ಅಡಗಿದ್ದ ಪ್ರಾಣಿಗಳು ಮುಕ್ತವಾಗಿ ಸುತ್ತಲು ಪ್ರಾರಂಭಿಸಿವೆ. ಈಗ, ಕಾಡು ಪ್ರಾಣಿಗಳು ಮತ್ತು ಪಕ್ಷಿಗಳನ್ನು ದಿನದ ಯಾವುದೇ ಸಮಯದಲ್ಲಿ ಅರಣ್ಯ ರಸ್ತೆಗಳ ಮೂಲಕ ಹಾದು ಹೋಗುವಾಗ ರಸ್ತೆಗಳಲ್ಲಿ ಮತ್ತು ಬದಿಗಳಲ್ಲಿ ಕಾಣಬಹುದು. ರಸ್ತೆಯ ವಾಹನಗಳಿಗೆ ಡಿಕ್ಕಿ ಹೊಡೆದು ಪ್ರಾಣಿಗಳು ಸಾಯುವ (ರೋಡ್​ ಕಿಲ್ಲ್) ಪ್ರಕರಣಗಳ ಸಂಖ್ಯೆಯೂ ಗಮನಾರ್ಹವಾಗಿ ಕಡಿಮೆಯಾಗಿದೆ.

ಕಾಡು ಕರಡಿಗಳು, ಆನೆಗಳು, ಜಿಂಕೆಗಳು, ನವಿಲುಗಳು ಮತ್ತು ಇನ್ನೂ ಅನೇಕ ವನ್ಯಜೀವಿಗಳು ಮುಕ್ತವಾಗಿ ಸಂಚರಿಸುತ್ತಿವೆ, ಮನುಷ್ಯರನ್ನು 'ಬಂಧಿಸಲಾಗಿರುವ' ಸಮಯವನ್ನು ಅವುಗಳು ಆನಂದಿಸುತ್ತವೆ. ಇದು ಪ್ರಕೃತಿಯೇ ನೀಡಿದ ಒಂದು ಬದಲಾವಣೆ ಎನ್ನಬಹುದೇನೋ.

ಈ ಪ್ರದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಾಗಿದೆ. ಹೆಚ್ಚಿನ ಪ್ರವಾಸಿಗರು ಇತ್ತ ಆಗಮಿಸುವ ಕಾರಣ ಕೋತಿಗಳು ಪ್ರವಾಸಿಗರು ನೀಡುವ ಆಹಾರ ವಸ್ತುಗಳನ್ನು ಅವಲಂಬಿಸಿವೆ. ಈಗ, ವಯನಾಡಿನಲ್ಲಿ ಪ್ರವಾಸಿಗರ ಇಲ್ಲವಾದ್ದರಿಂದ ಕೋತಿಗಳು ಕಾಡು ಹಣ್ಣುಗಳನ್ನು ಹುಡುಕುವ ಕಾಯಕಕ್ಕೆ ಇಳಿದಿವೆ. ಇದು ಬಹಳ ಸಕಾರಾತ್ಮಕ ಸೂಚನೆ ಎಂದು ಪರಿಸರವಾದಿಗಳು ಹೇಳುತ್ತಾರೆ.

ನಿರಂತರ ವಾಹನ ಸಂಚಾರವನ್ನು ಹೊಂದಿದ್ದ ಈ ಅರಣ್ಯ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ಮುಕ್ತವಾಗಿ ಚಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಲಾಕ್​ಡೌನ್​ನಿಂದಾಗಿ ವಾಹನ ಚಾಲನೆಯ ಹಠಾತ್ ಕುಸಿತವು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಮುಕ್ತವಾಗಿ ತಿರುಗಾಡಲು ಅನುವು ಮಾಡಿಕೊಟ್ಟಿದೆ ಎಂದು ತಿಳಿದುಬಂದಿದೆ. ಇಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದ್ದ ರೋಡ್​ ಕಿಲ್ಲ್ ಪ್ರಕರಣದ ಸಂಖ್ಯೆಯೂ ಗಣನೀಯವಾಗಿ ಇಳಿದಿದೆ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಮುನೀರ್.

ABOUT THE AUTHOR

...view details