ಪಾಟ್ನಾ(ಬಿಹಾರ):ಬಿಹಾರ ಅಸೆಂಬ್ಲಿ ಚುನಾವಣೆಯ ಕಾವು ದಿನದಿಂದ ಜೋರಾಗುತ್ತಿದೆ. ಈಗಾಗಲೇ ಕೆಲವು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು ಭರದ ಪ್ರಚಾರದಲ್ಲಿ ಭಾಗಿಯಾಗಿವೆ. ಇದರ ಮಧ್ಯೆ ಆರ್ಜೆಡಿ ಶಾಸಕರೊಬ್ಬರು ಪಕ್ಷ ಟಿಕೆಟ್ ನಿರಾಕರಣೆ ಮಾಡಿದ್ದರಿಂದ ನೊಂದ ಪರಿಣಾಮ ಹೃದಯಾಘಾತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಟಿಕೆಟ್ ಸಿಗದ ನೋವು: ಆರ್ಜೆಡಿ ಶಾಸಕನಿಗೆ ಹೃದಯಾಘಾತ
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದ ಕಾರಣಕ್ಕಾಗಿ ಆರ್ಜೆಡಿ ಶಾಸಕರೊಬ್ಬರು ಹೃದಯಾಘಾತಕ್ಕೊಳಾಗಿದ್ದಾರೆ.
RJD MLA Got Heart Attack
ಬಿಹಾರದ ಭೋಜ್ಪುರದಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಸುತ್ತಿದ್ದ ವೇಳೆ ಆರ್ಜೆಡಿ ಶಾಸಕ ಅನ್ವರ್ ಆಲಂ ಎದೆನೋವು ಕಾಣಿಸಿಕೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದರಿಂದಲೇ ತೀವ್ರವಾಗಿ ಚಿಂತೆಗೊಳಗಾಗಿದ್ದರು ಎಂಬ ಮಾಹಿತಿ ದೊರೆತಿದೆ. ಕಳೆದ ಸಲ ಆರಾ ಕ್ಷೇತ್ರದಲ್ಲಿ ಅವರು ಬಿಜೆಪಿ ಶಾಸಕರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು.
ಶಾಸಕರ ಸದ್ಯದ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.