ಕರ್ನಾಟಕ

karnataka

ETV Bharat / bharat

ಮಗಳ ಮದ್ವೆಗೆ ಬರುವಂತೆ ಪ್ರಧಾನಿಗೆ ಪತ್ರ: ಮೋದಿ ರಿಪ್ಲೈಗೆ ರಿಕ್ಷಾವಾಲಾ ದಿಲ್‌ಖುಷ್​ - ಪ್ರಧಾನಿ ಮೋದಿ

ಪುತ್ರಿಯ ವಿವಾಹಕ್ಕೆ ಬರುವಂತೆ ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ರಿಕ್ಷಾ ಎಳೆಯುವ ಮಂಗಲ್ ಕೆವತ್ ಎಂಬುವವರು ಪತ್ರ ಬರೆದಿದ್ದರು.

PM Modi
ಪ್ರಧಾನಿ ಮೋದಿ

By

Published : Feb 14, 2020, 9:54 PM IST

Updated : Feb 14, 2020, 11:21 PM IST

ವಾರಣಾಸಿ: ತನ್ನ ಮಗಳ ಮದುವೆಗೆ ಬಂದು ನವ ದಂಪತಿಗೆ ಆಶೀರ್ವಾದ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಣಾಸಿಯಲ್ಲಿ ರಿಕ್ಷಾ ಎಳೆಯುವ ಮಂಗಲ್ ಕೆವತ್ ಎಂಬುವವರು ಪತ್ರ ಬರೆದಿದ್ದರು.

ಪ್ರಧಾನಿಯ ಲೋಕಸಭಾ ಕ್ಷೇತ್ರವಾದ ವಾರಣಾಸಿ ರಿಕ್ಷಾ ಎಳೆಯುವವನ ಪತ್ರಕ್ಕೆ ಮೋದಿ ಅವರಿಂದ ಪ್ರತ್ಯುತ್ತರ ಬಂದಿದೆ. ಗುರುವಾರ ಕೆವತ್ ಕುಟುಂಬ ತಲುಪಿದ ಪತ್ರದಲ್ಲಿ ಮಗಳ ವಿವಾಹಕ್ಕೆ ಶುಭಕೋರಿದ್ದಾರೆ.

ಪತ್ರದಲ್ಲಿ ಮೋದಿ, ನೂತನ ದಂಪತಿಗೆ ಆಶೀರ್ವಾದಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ನನ್ನ ಕೆಲವು ಸ್ನೇಹಿತರು ಮೋದಿ ಅವರಿಗೆ ಆಹ್ವಾನ ಪತ್ರ ಕಳುಹಿಸಲು ನನ್ನನ್ನು ಕೇಳಿದರು. ಹಾಗಾಗಿಯೇ ನಾನು ಒಂದು ಪತ್ರವನ್ನು ದೆಹಲಿಗೆ ಮತ್ತೊಂದು ಪತ್ರವನ್ನು ವಾರಣಾಸಿಯ ಕಚೇರಿಗೆ ಕಳುಹಿಸಿದೆ ಎಂದರು.

ಪ್ರಧಾನಿಯಿಂದ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ, ಈಗ ನಾವು ಅವರ ಶುಭಾಶಯದ ಪತ್ರವನ್ನು ಸ್ವೀಕರಿಸಿದ್ದೇವೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ನನ್ನ ಮಗಳ ಮದುವೆಗೆ ಬಂದಿದ್ದ ಎಲ್ಲಾ ಅತಿಥಿಗಳಿಗೆ ಆ ಪತ್ರವನ್ನು ತೋರಿಸಿದ್ದೇನೆ ಎಂದು ಸಂತಸ ಹಂಚಿಕೊಂಡರು.

Last Updated : Feb 14, 2020, 11:21 PM IST

ABOUT THE AUTHOR

...view details