ಮುಂಬೈ:2016ರ ನವೆಂಬರ್ ತಿಂಗಳಲ್ಲಿ ಏಕಾಏಕಿಯಾಗಿ ಹಳೇ 500 ರೂ. ಹಾಗೂ ಸಾವಿರ ಮುಖಬೆಲೆ ನೋಟ್ ಬ್ಯಾನ್ ಮಾಡಿದ ಬಳಿಕ ಹೊಸದಾಗಿ ಐನೂರು, ಎರಡು ಸಾವಿರ ಮುಖಬೆಲೆಯ ನೋಟ್ ಮುದ್ರಣ ಮಾಡಿ ಕೇಂದ್ರ ಸರ್ಕಾರ ಚಲಾವಣೆಗೆ ತಂದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುದ್ರಣಗೊಂಡಿಲ್ಲ ಒಂದೇ ಒಂದು Rs 2,000 ನೋಟ್... ಮತ್ತೆ ಆಗುತ್ತಾ ಬ್ಯಾನ್!? - ಭಾರತೀಯ ರಿಜರ್ವ್ ಬ್ಯಾಂಕ್
ಪ್ರಸಕ್ತ ಸಾಲಿನ ಅರ್ಥಿಕ ವರ್ಷದಲ್ಲಿ ಒಂದೇ ಒಂದು 2000 ಸಾವಿರ ಮುಖಬೆಲೆಯ ನೋಟ್ ಮುದ್ರಣಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ, ಸದ್ಯದ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ನಿಂದ ಒಂದೇ ಒಂದು ಎರಡು ಸಾವಿರ ಮುಖಬೆಲೆ ನೋಟ್ ಮುದ್ರಣಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. 2016-17ರ ಆರ್ಥಿಕ ವರ್ಷದಲ್ಲೇ ಬರೋಬ್ಬರಿ 3,542.991 ಮಿಲಿಯನ್ ನೋಟ್ ಮುದ್ರಣಗೊಂಡಿದ್ದು, ತದನಂತರ 2017-18ರಲ್ಲಿ 111.507 ಮಿಲಿಯನ್ ನೋಟ್ ಹಾಗೂ 2017-18ರಲ್ಲಿ 46.690 ಮಿಲಿಯನ್ ನೋಟ್ ಮುದ್ರಣವಾಗಿವೆ. ಆದರೆ, ಪ್ರಸಕ್ತ 2018-19ನೇ ಸಾಲಿನಲ್ಲಿ ಒಂದೇ ಒಂದು ನೋಟ್ ಕೂಡ ಮುದ್ರಣವಾಗಿಲ್ಲ ಎಂಬ ಮಾಹಿತಿ, ಮಾಹಿತಿ ಕಾಯ್ದೆ ಹಕ್ಕಿನಡಿ ಲಭ್ಯವಾಗಿದೆ.
ಕಪ್ಪು ಹಣ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಆರ್ಬಿಐ ದೊಡ್ಡ ಪ್ರಮಾಣದ ನೋಟ್ ಮುದ್ರಣ ಮಾಡುತ್ತಿಲ್ಲ ಎನ್ನಲಾಗಿದ್ದು, ಆಂಧ್ರಪ್ರದೇಶ - ತಮಿಳುನಾಡು ಗಡಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ 2 ಸಾವಿರ ಮುಖಬೆಲೆಯ 6 ಕೋಟಿ ರೂ ಹಣ ಪತ್ತೆಯಾಗಿತ್ತು. ಜತೆಗೆ ಚುನಾವಣೆ ಸಂದರ್ಭದಲ್ಲಿ 2000 ಸಾವಿರ ಮುಖಬೆಲೆ ನೋಟ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣಕ್ಕಾಗಿ ದೊಡ್ಡ ಪ್ರಮಾಣದ ನೋಟ್ ಮುದ್ರಣ ಮಾಡುವುದನ್ನ ನಿಲ್ಲಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಸಹ 2 ಸಾವಿರ ಮುಖ ಬೆಲೆಯ ನೋಟುಗಳನ್ನ ಬ್ಯಾನ್ ಮಾಡಲ್ಲ ಎಂದು ಸ್ಪಷ್ಟನೆ ಸಹ ನೀಡಿದೆ.