ಕರ್ನಾಟಕ

karnataka

By

Published : Mar 30, 2020, 10:45 AM IST

Updated : Mar 30, 2020, 3:18 PM IST

ETV Bharat / bharat

ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಈಟಿವಿ ಭಾರತ್ ವರದಿಗಾರರು

ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಲಾಕ್​ಡೌನ್ ಹಿನ್ನೆಲೆ, ಈಟಿವಿ ಭಾರತ್ ಪತ್ರಕರ್ತರು ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.

etv
etv

ರಾಂಚಿ (ಜಾರ್ಖಂಡ್​​): ಈಟಿವಿ ಭಾರತ್ ವರದಿಗಾರರು ಮನೆಯಿಲ್ಲದವರಿಗೆ, ಕಾರ್ಮಿಕರಿಗೆ ಮತ್ತು ಲಾಕ್​ಡೌನ್​ನಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದು, ಅವರಿಗೆ ಆಹಾರ ನೀಡುತ್ತಿದ್ದಾರೆ.

ತಮ್ಮ ಊರಿಗೆ ತೆರಳುವ ಸಲುವಾಗಿ ಅನೇಕ ಕಾರ್ಮಿಕರು ರಾಂಚಿ ನಗರದ ಜಗನ್ನಾಥ​ಪುರ್​ಗೆ ಆಗಮಿಸಿದ್ದರು. ಆದರೆ ಕೋವಿಡ್​-19 ಹರಡುವ ಭೀತಿಯಿಂದ, ಲಾಕ್​ಡೌನ್​ ಆದೇಶದ ಮೇರೆಗೆ ಎಲ್ಲಾ ಸಾರಿಗೆ ವ್ಯವಸ್ಥೆಗಳನ್ನು ರದ್ದುಗೊಳಿಸಲಾಗಿದೆ.

ಕೆಲಸವೂ ಇಲ್ಲದೇ, ಉರಿಗೆ ತೆರಳಲೂ ಆಗದೇ ತ್ರಿಶಂಕು ಪರಿಸ್ಥಿತಿಯಲ್ಲಿದ್ದ ಕಾರ್ಮಿಕರನ್ನು ಈಟಿವಿ ಭಾರತದ ವರದಿಗಾರರು ಭೇಟಿಯಾಗುತ್ತಾರೆ. ಈ ಸಂದರ್ಭದಲ್ಲಿ ತಾವು ಗುಮ್ಲಾ ಎಂಬ ಊರಿಗೆ ತೆರಳಬೇಕಾಗಿದ್ದು, ಬೆಳಗ್ಗೆ 4 ಗಂಟೆಗೆ ಹೊಟಿರುವುದಾಗಿ ಕಾರ್ಮಿಕರು ತಿಳಿಸುತ್ತಾರೆ.

ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಈಟಿವಿ ಭಾರತ್ ವರದಿಗಾರರು

ಅವರ ಕಷ್ಟ ಕೇಳಿದ ಈಟಿವಿ ಭಾರತ್ ವರದಿಗಾರರು ಅವರನ್ನು ಮುಖ್ಯಮಂತ್ರಿಗಳ ದಾಲ್ ಭಾಟ್ ಕೇಂದ್ರಕ್ಕೆ ಕರೆದೊಯ್ದುಊಟ ಮಾಡಿಸಿದ್ದಾರೆ. ಬಳಿಕ, ಎಲ್ಲ ಐದು ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದರು.

ದೈನಂದಿನ ಕೆಲಸಗಳಿಂದ ದುಡಿದು ಸಂಪಾದಿಸುವ ಅನೇಕ ಕಾರ್ಮಿಕರು ಲಾಕ್​ಡೌನ್ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಟಿವಿ ಭಾರತ್ ವರದಿಗಾರರು ಅಂಥವರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.

Last Updated : Mar 30, 2020, 3:18 PM IST

ABOUT THE AUTHOR

...view details