ಕರ್ನಾಟಕ

karnataka

ETV Bharat / bharat

ರಾಜಸ್ಥಾನದ ದಂಪತಿ ಹಾಗೂ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು!

ಮಹಾಮಾರಿ ಕೊರೊನಾ ಭೀತಿ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ತೆಲಂಗಾಣದಲ್ಲಿ 7 ಮಂದಿಗೆ ಸೋಂಕು ಪತ್ತೆಯಾಗಿದೆ.

Rajasthan couple, 2-year-old daughter test positive for coronavirus
Rajasthan couple, 2-year-old daughter test positive for coronavirus

By

Published : Mar 19, 2020, 2:22 AM IST

ಜೈಪುರ್​​(ರಾಜಸ್ಥಾನ):ಇಟಲಿಯಿಂದ ವಾಪಸ್​ ಆಗಿದ್ದ ರಾಜಸ್ಥಾನದ ದಂಪತಿ ಹಾಗೂ ಅವರ ಎರಡು ವರ್ಷದ ಮಗುವಿನಲ್ಲಿ ಇದೀಗ ಕೊರೊನಾ ವೈರಸ್​ ಪತ್ತೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇಟಲಿಯಿಂದ ಭಾರತಕ್ಕೆ ವಾಪಸ್​ ಆಗಿದ್ದ 21 ಜನರ ಗ್ರೂಪ್​ನಲ್ಲಿ ಇವರಿದ್ದರು ಎಂದು ತಿಳಿದು ಬಂದಿದೆ.

ಜೈಪುರಕ್ಕೆ ಆಗಮಿಸಿದ್ದ ಇಟಲಿಯ ಪ್ರವಾಸಿಗರಲ್ಲಿ ಕೊರೊನಾ ವೈರಸ್​ ಇರುವುದು ದೃಢಪಟ್ಟಿತ್ತು. ಇದೀಗ ಇವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇವರು ವಾಸವಾಗಿದ್ದ ಮನೆಯ 1 ಕಿಲೋ ಮೀಟರ್​ ಸುತ್ತಮುತ್ತ ಯಾವುದೇ ಸಂಚಾರ ಮಾಡದಂತೆ ಈಗಾಗಲೇ ನಿಷೇಧಾಜ್ಞೆ ಹೆರಲಾಗಿದೆ.

ಕೊರೊನಾ ಪತ್ತೆಯಾದ ಇಟಲಿ ದಂಪತಿ ರಾಜಸ್ಥಾನದ ಐದು ಗ್ರಾಮಗಳಲ್ಲಿ ಸುತ್ತಾಡಿದ್ದಾರೆ ಎಂದು ಹೇಳಲಾಗಿದ್ದು, ಇವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೆಲವರಿಗೂ ಕೊರೊನಾ ತಗಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಈಗಾಗಲೇ 151 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ ತೆಲಗಾಂಣದಲ್ಲಿ ಏಳು ಮಂದಿಗೆ ವೈರಸ್​ ಇರುವುದು ಪತ್ತೆಯಾಗಿದೆ. ಹೀಗಾಗಿ ದೇಶದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

...view details