ಜುಂಜುನು(ರಾಜಸ್ಥಾನ):ಚಾಲಕನ ನಿಯಂತ್ರಣ ತಪ್ಪಿ ಹಾಲು ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ ಹಾಲು ರಸ್ತೆ ಪಾಲಾಗಿರುವ ಘಟನೆ ರಾಜಸ್ಥಾನದ ಜುಂಜುನು ಗ್ರಾಮದ ಬಳಿ ನಡೆದಿದೆ.
ಹಾಲಿನ ಟ್ಯಾಂಕರ್ ಪಲ್ಟಿ: ಬಕೆಟ್,ಕ್ಯಾನ್‍ಗಳಲ್ಲಿ ಹಾಲು ತುಂಬಿಸಿಕೊಂಡ ಜನ್ರು! - ಪಲ್ಟಿ
ಹಾಲು ತುಂಬಿಸಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ, ಬಿಂದಿಗೆ,ಬಾಟಲ್, ಬಕೆಟ್ ಹಾಗೂ ಕ್ಯಾನ್‍ಗಳಲ್ಲಿ ಹಾಲು ತುಂಬಿಸಿಕೊಂಡು ಜನರು ಮನೆಗೆ ತೆರಳಿದ್ದಾರೆ.
ಹಾಲಿನ ಟ್ಯಾಂಕರ್ ಪಲ್ಟಿ
ಘಟನೆ ನಡೆಯುತ್ತಿದ್ದಂತೆ ಹಾಲು ರಸ್ತೆ ಪಾಲಾಗುತ್ತಿರುವುದನ್ನ ಗಮನಿಸಿದ ಜನರು ಬಿಂದಿಗೆ, ಬಾಟಲ್,ಬಕೆಟ್ ಮತ್ತು ಕ್ಯಾನ್‍ಗಳಲ್ಲಿ ತುಂಬಿಸಿಕೊಂಡು ಮನೆಗೆ ತೆರಳಿದ್ದಾರೆ. ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕ್ರೇನ್ ಮೂಲಕ ಟ್ಯಾಂಕರ್ ಮೇಲೆ ಎತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ಸಹ ದಾಖಲಾಗಿರುವುದಾಗಿ ತಿಳಿದು ಬಂದಿದೆ.
Last Updated : Jun 28, 2019, 1:26 PM IST