ಕರ್ನಾಟಕ

karnataka

By

Published : Oct 5, 2020, 3:31 PM IST

ETV Bharat / bharat

ಹಬ್ಬದ ಅವಧಿಯಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದ ರೈಲ್ವೆ ಮಂಡಳಿ

ಹಬ್ಬದ ಹಿನ್ನೆಲೆ ಇನ್ನೂ 200 ವಿಶೇಷ ರೈಲುಗಳು ಬರುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದರು. ಇದಕ್ಕಾಗಿ ಮೀಸಲಾತಿ ಪ್ರಾರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ..

train
train

ಹೈದರಾಬಾದ್ :ಹಬ್ಬದ ಅವಧಿಯಲ್ಲಿ ದೇಶಾದ್ಯಂತ ಸುಮಾರು 200 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಯೋಜಿಸಿದೆ. ದಕ್ಷಿಣ ಸೆಂಟ್ರಲ್ ರೈಲ್ವೆ 17 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದೆ. ಈ ಪಟ್ಟಿಯನ್ನು ರೈಲ್ವೆ ಮಂಡಳಿ ಒಂದು ಅಥವಾ ಎರಡು ದಿನಗಳಲ್ಲಿ ಅನುಮೋದಿಸಲಿದೆ.

ಗೌತಮಿ, ನರಸಾಪುರ, ನಾರಾಯಣಾದ್ರಿ, ಚಾರ್ಮಿನಾರ್, ಸಬಾರಿ, ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಇತರ 11 ರೈಲುಗಳು ಪ್ರಯಾಣಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, ಸೆಪ್ಟೆಂಬರ್ 30ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ವಲಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಹಬ್ಬದ ಹಿನ್ನೆಲೆ ಇನ್ನೂ 200 ವಿಶೇಷ ರೈಲುಗಳು ಬರುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದರು. ಇದಕ್ಕಾಗಿ ಮೀಸಲಾತಿ ಪ್ರಾರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ.

ಲಭ್ಯವಿರುವ ರೈಲುಗಳು ಹೀಗಿವೆ :

ಸಿಕಂದರಾಬಾದ್-ತಿರುವನಂತಪುರಂ,

ಸಿಕಂದರಾಬಾದ್-ಗುವಾಹಟಿ,

ಸಿಕಂದರಾಬಾದ್-ತಿರುಪತಿ,

ಸಿಕಂದರಾಬಾದ್-ಕಾಕಿನಾಡ,

ಸಿಕಂದರಾಬಾದ್-ನರಸಾಪುರ,

ಹೈದರಾಬಾದ್- ಚೆನ್ನೈ,

ಕಚಿಗುಡಾ- ಮೈಸೂರು,

ಕಡಪ-ವಿಶಾಖಪಟ್ಟಣಂ,

ಪೂರ್ಣ- ಪಾಟ್ನಾ,

ಸಿಕಂದರಾಬಾದ್-ರಾಜ್‌ಕೋಟ್,

ವಿಜಯವಾಡ - ಹುಬ್ಬಳ್ಳಿ,

ಹೈದರಾಬಾದ್-ಜೈಪುರ,

ಹೈದರಾಬಾದ್- ರೊಕ್ಸೂಲ್,

ತಿರುಪತಿ - ಅಮರಾವತಿ (ಮಹಾರಾಷ್ಟ್ರ),

ನಾಗ್ಪುರ - ಚೆನ್ನೈ,

ಸಿಕಂದರಾಬಾದ್ - ಹೌರಾ,

ಭುವನೇಶ್ವರ - ಬೆಂಗಳೂರು.

ABOUT THE AUTHOR

...view details