ಕೋಟಾ (ರಾಜಸ್ತಾನ): ಮುಂಗಡವಾಗಿ ಬುಕ್ ಮಾಡಿದ ರೈಲ್ವೆ ಟಿಕೆಟ್ಗಳನ್ನು ರದ್ದು ಮಾಡಿದ ಶುಲ್ಕ ಹಾಗೂ ವೇಟಿಂಗ್ ಲಿಸ್ಟ್ನಲ್ಲಿರುವ ಟಿಕೆಟ್ಗಳನ್ನು ರದ್ದು ಮಾಡದೇ ಇರುವುದರ ಕಾರಣದಿಂದ ಭಾರತೀಯ ರೈಲ್ವೆ ಸುಮಾರು 9 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ. ರಾಜಸ್ತಾನದ ಕೋಟಾ ಮೂಲದ ಆರ್ಟಿಐ ಕಾರ್ಯಕರ್ತ ಸುಜೀತ್ ಸ್ವಾಮಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿದ ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಷನ್ ಸಿಸ್ಟಮ್ (ಸಿಆರ್ಎಸ್) ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದೆ. 2017 ಜನವರಿ 1ರಿಂದ 2020ರ ಜನವರಿ 31ರವರೆಗೆ ಸುಮಾರು ಒಂಬತ್ತೂವರೆ ಕೋಟಿ ಪ್ರಯಾಣಿಕರು ತಮ್ಮ ವೇಟಿಂಗ್ ಲಿಸ್ಟ್ನಲ್ಲಿದ್ದ ಟಿಕೆಟ್ಗಳನ್ನು ರದ್ದುಪಡಿಸಿರಲಿಲ್ಲ. ಇದರಿಂದಾಗಿ ಸುಮಾರು 4,335 ಕೋಟಿ ರೂಪಾಯಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ ಕಾಯ್ದಿರಿಸಲಾಗಿದ್ದ ಆಸನಗಳನ್ನು ರದ್ದು ಪಡಿಸಿದ್ದಕ್ಕಾಗಿ ವಿಧಿಸಿದ ಶುಲ್ಕದಿಂದಾಗಿ 4,684 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಸಿಎಸ್ಆರ್ ಹೇಳಿದೆ.
ಭಾರತೀಯ ರೈಲ್ವೆಗೆ 3 ವರ್ಷಗಳಲ್ಲಿ ಹರಿದು ಬಂತು 9 ಸಾವಿರ ಕೋಟಿ ಆದಾಯ.! - ಆರ್ಟಿಐ
ಭಾರತೀಯ ರೈಲ್ವೆ ಭಾರತದಲ್ಲೇ ಅತಿ ದೊಡ್ಡ ಸಾರಿಗೆ ವ್ಯವಸ್ಥೆ, ದಿನವೊಂದಕ್ಕೆ ಲಕ್ಷಾಂತರ ಪ್ರಯಾಣಿಕರು ರೈಲ್ವೆಯ ಮೂಲಕ ಸಂಚರಿಸುತ್ತಾರೆ. ರೈಲ್ವೆ ಪ್ರಯಾಣಿಕರು ಹಾಗೂ ಸರಕು ಸಾಗಣೆಯಿಂದ ಮಾತ್ರವಲ್ಲದೇ ನಿರಾಯಾಸವಾಗಿ ಭಾರತೀಯ ರೈಲ್ವೆಗೆ ಆದಾಯ ಹರಿದು ಬಂದಿದೆ.
ರೈಲಿನಲ್ಲಿ ಪ್ರಯಾಣ ಮಾಡುವ ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಂದ ಹೆಚ್ಚು ಆದಾಯ ಬಂದಿದೆ ಎಂದು ಸಿಎಸ್ಆರ್ ಸ್ಪಷ್ಟನೆ ನೀಡಿದೆ. ಈ ಮೂರು ವರ್ಷಗಳ ಅವಧಿಯಲ್ಲಿ 145 ಕೋಟಿ ಪ್ರಯಾಣಿಕರು ಇಂಟರ್ನೆಟ್ ಮೂಲಕ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದಾರೆ. 74 ಕೋಟಿ ಮಂದಿ ಟಿಕೆಟ್ ಕೌಂಟರ್ಗಳಲ್ಲಿ ಟಿಕೆಟ್ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್ಟಿಐ ಕಾರ್ಯಕರ್ತ ಸುಜೀತ್ ಸ್ವಾಮಿ ರಾಜಸ್ತಾನ ಹೈಕೋರ್ಟ್ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ವಿಚಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಭಾರತೀಯ ರೈಲ್ವೆ ಅನಗತ್ಯವಾಗಿ ಆದಾಯ ಗಳಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ಹೋರಾಡುತ್ತಿದ್ದಾರೆ.