ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ: ವಿಡಿಯೋ ರಿಲೀಸ್ ಮಾಡಿದ ರಾಹುಲ್​! - ಉತ್ತರ ಪ್ರದೇಶ ಹಥ್ರಾಸ್​​ ರೇಪ್​ ಕೇಸ್​

ಉತ್ತರ ಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂತ್ರಸ್ತೆ ಕುಟುಂಬ ಭೇಟಿ ಮಾಡಿದ್ದ ರಾಹುಲ್​ ಗಾಂಧಿ ಇದೀಗ ಅದರ ವಿಡಿಯೋ ರಿಲೀಸ್​​ ಮಾಡಿದ್ದಾರೆ.

Hathras victim's family video
Hathras victim's family video

By

Published : Oct 7, 2020, 8:14 PM IST

ನವದೆಹಲಿ:ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಯುವತಿ ಕುಟುಂಬ ಭೇಟಿ ಮಾಡಿದ್ದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇದೀಗ ಅದರ ವಿಡಿಯೋ ರಿಲೀಸ್​ ಮಾಡಿದ್ದಾರೆ.

ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ ಮಾಡಿರುವ ವಿಡಿಯೋ ರಿಲೀಸ್ ಮಾಡಿದ ರಾಹುಲ್​

ಬಹಳಷ್ಟು ಹೈಡ್ರಾಮಾ ನಂತರ ಕಳೆದ ಶನಿವಾರ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಐವರಿಗೆ ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಅವರಿಗೆ ಉಭಯ ನಾಯಕರು ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಸಂತ್ರಸ್ತೆ ಕುಟುಂಬದೊಂದಿಗೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಡೆಸಿರುವ ಸಂವಾದದ ವಿಡಿಯೋ ತುಣುಕವೊಂದನ್ನ ರಾಹುಲ್​ ಗಾಂಧಿ ತಮ್ಮ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂತ್ರಸ್ತೆ ಕುಟುಂಬದೊಂದಿಗೆ ರಾಹುಲ್​ ಗಾಂಧಿ ಯಾವೆಲ್ಲ ವಿಚಾರವಾಗಿ ಮಾತನಾಡಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.

ಹಥ್ರಾಸ್​ ಸಂತ್ರಸ್ತೆ ಕುಟುಂಬ ಯುಪಿ ಸರ್ಕಾರದ ಶೋಷಣೆ ಮತ್ತು ದೌರ್ಜನ್ಯ ಹೇಗೆ ಎದುರಿಸಬೇಕಾಗಿದೆ ನೋಡಿ ಎಂದು ಬರೆದುಕೊಂಡಿರುವ ರಾಹುಲ್​ ಗಾಂಧಿ, ಅವರಿಗೆ ಮಾಡಿದ ಅನ್ಯಾಯದ ಸತ್ಯ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಾಗಬೇಕು ಎಂದು ಅದರಲ್ಲಿ ತಿಳಿಸಿದ್ದಾರೆ.

ನಾಲ್ವರು ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇದಾದ ಬಳಿಕ ನವದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನ ಈಗಾಗಲೇ ಸಿಬಿಐ ತನಿಖೆಗೊಳಪಡಿಸಲಾಗಿದೆ.

ABOUT THE AUTHOR

...view details