ನೋಯ್ಡಾ: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಯುವತಿ ಕುಟುಂಬ ಭೇಟಿ ಮಾಡಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇದೀಗ ಐವರಿಗೆ ಅನುಮತಿ ನೀಡಲಾಗಿದೆ.
ಹಥ್ರಾಸ್ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ರಾಹುಲ್, ಪ್ರಿಯಾಂಕಾ ಸೇರಿ ಐವರಿಗೆ ಅನುಮತಿ - ಹಥ್ರಾಸ್ ಸಂತ್ರಸ್ತೆ ಕುಟುಂಬ
ಇಂದು ಮತ್ತೊಮ್ಮೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಥ್ರಾಸ್ನತ್ತ ಪ್ರಯಾಣ ಬೆಳೆಸಿದ್ದಾರೆ. ದೆಹಲಿ - ನೋಯ್ಡಾ ರಸ್ತೆಯಲ್ಲಿ ಅವರನ್ನ ತಡೆಹಿಡಿಯಲಾಗಿದ್ದು, ಕೇವಲ ಐವರಿಗೆ ಸಂತ್ರಸ್ತೆಯ ಕುಟುಂಬ ಭೇಟಿ ಮಾಡಲು ಅವಕಾಶ ನೀಡಲಾಗಿದೆ.
UP's Hathras to meet victim's family
ಮತ್ತೊಮ್ಮೆ ಪ್ರಯತ್ನ: ಹಥ್ರಾಸ್ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳಿದ ರಾಹುಲ್, ಪ್ರಿಯಾಂಕಾ ಗಾಂಧಿ!
ಕಳೆದೆರಡು ದಿನಗಳ ಹಿಂದೆ ಹಥ್ರಾಸ್ಗೆ ತೆರಳುತ್ತಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಗೆ ನೋಯ್ಡಾ ಪೊಲೀಸರು ಘೇರಾವ್ ಹಾಕಿ ದೆಹಲಿಗೆ ಹಿಂದಿರುಗಿಸಿದ್ದರು. ಆದರೆ, ಇಂದು ಮತ್ತೊಮ್ಮೆ ಅವರು ತೆರಳುತ್ತಿದ್ದರು. ಈ ವೇಳೆ, ನೋಯ್ಡಾ ಪೊಲೀಸರು ಅವರನ್ನು ತಡೆ ಹಿಡಿದಿದ್ದರು. ಇನ್ನು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡುತ್ತಿದ್ದಂತೆ ದೆಹಲಿ-ನೋಯ್ಡಾ ಫ್ಲೈ ಓವರ್ ಬಳಿ ರಾಹುಲ್ ಗಾಂಧಿ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
Last Updated : Oct 3, 2020, 10:45 PM IST