ನವದೆಹಲಿ:ಬಿಹಾರದಲ್ಲಿ ಮಳೆ ಗಾಳಿ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಗುಡುಗು ಸಿಡಿಲಿಗೆ ಕೇವಲ ಒಂದು ದಿನ ಅಂದರೆ 24 ಗಂಟೆಯಲ್ಲಿ ಕನಿಷ್ಠ 83 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕೇವಲ ಬಿಹಾರ ಮಾತ್ರ ಅಲ್ಲ ಉತ್ತರ ಪ್ರದೇಶದಲ್ಲೂ ಗುಡುಗು - ಸಿಡಿಲಿಗೆ 24 ಮಂದಿ ಬಲಿಯಾಗಿದ್ದಾರೆ. ಒಟ್ಟಾರೆ ಎರಡೂ ರಾಜ್ಯದಲ್ಲಿ ಸುಮಾರು 107 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದಾರೆ.