ನವದೆಹಲಿ:ಕೇಂದ್ರದ ಮಾಜಿ ಹಣಕಾಸು ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸಿನ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಜೇಟ್ಲಿ ಅವರ ಪತ್ನಿಗೆ ಭಾವುಕ ಪತ್ರ ಬರೆದು ಕಳುಹಿಸಿದ್ದಾರೆ.
ಬಹು ಅಂಗಾಂಗಳ ವೈಪಲ್ಯದಿಂದ ಶನಿವಾರ ಮಧ್ಯಾಹ್ನ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಅರುಣ್ ಜೇಟ್ಲಿ ಅವರಿಗೆ ಪಕ್ಷಾತೀತವಾಗಿ ದೇಶದ ಮುಖಂಡರು ಸಂತಾಪ ಸೂಚಿಸಿದ್ದಾರೆ. ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸೋನಿಯಾ ಹಾಗೂ ರಾಹುಲ್ ಗಾಂಧಿ ತಮ್ಮ ನೋವಿನ ಭಾವನೆಗಳನ್ನು ಸಂಗೀತಾ ಜೇಟ್ಲಿ ಅವರಿಗೆ ಬರೆದ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.