ಕರ್ನಾಟಕ

karnataka

ETV Bharat / bharat

ಧಾರ್ಮಿಕ ಸ್ಥಳಗಳಲ್ಲಿ ದಾಸೋಹಕ್ಕೆ ಪಂಜಾಬ್ ಸರ್ಕಾರ ಅವಕಾಶ - ಪಂಜಾಬ್ ಸರ್ಕಾರ

ಆಹಾರ ತಯಾರಿಸುವಾಗ ಮತ್ತು ವಿತರಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

prasad
prasad

By

Published : Jun 10, 2020, 4:59 PM IST

Updated : Jun 10, 2020, 5:08 PM IST

ಚಂಡೀಗಢ(ಪಂಜಾಬ್):ರಾಜ್ಯದ ಧಾರ್ಮಿಕ ಸ್ಥಳಗಳಲ್ಲಿ ಸಮುದಾಯ ಅಡುಗೆಮನೆ ಕಾರ್ಯನಿರ್ವಹಿಸಲು ಮತ್ತು ಪ್ರಸಾದ ವಿತರಣೆಗೆಪಂಜಾಬ್ ಸರ್ಕಾರ ಅವಕಾಶ ನೀಡಿದೆ. ಹಿಂದಿನ ಮಾರ್ಗಸೂಚಿಗಳ ಪ್ರಕಾರ ಧಾರ್ಮಿಕ ಸ್ಥಳಗಳಲ್ಲಿ ಪ್ರಸಾದ, ಆಹಾರ ಮತ್ತು ಲಂಗರ್ (ದೇವರ ಹೆಸರಲ್ಲಿ ಉಚಿತ ಊಟ) ವಿತರಣೆ ನಿಷೇಧಿಸಲಾಗಿತ್ತು.

ಆದರೆ, ಈಗ ಸಾಮಾಜಿಕ ಅಂತರದ ಮಾನದಂಡಗಳನ್ನು ಪಾಲಿಸಿ ಪ್ರಸಾದ ವಿತರಣೆಗೆ ಅವಕಾಶ ನೀಡಲಾಗಿದೆ. "ಆಹಾರ ತಯಾರಿಸುವಾಗ ಮತ್ತು ವಿತರಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

Last Updated : Jun 10, 2020, 5:08 PM IST

ABOUT THE AUTHOR

...view details