ಕರ್ನಾಟಕ

karnataka

ETV Bharat / bharat

ದೇಶದ 90 ವೈದ್ಯರು, ಅನೇಕ ನರ್ಸ್​​ಗಳಿಗೆ ಕೊರೊನಾ; ಪುಣೆಯಲ್ಲಿ 30 ಮಂದಿಗೆ ಕ್ವಾರಂಟೈನ್​

ಕೊರೊನಾ ಮಹಾಮಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕೊರೊನಾ ಭೀತಿ ಕಾಡುತ್ತಿದ್ದು, ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ, 90 ವೈದ್ಯರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

COVID-19 positive
COVID-19 positive

By

Published : Apr 12, 2020, 7:17 PM IST

ನವದೆಹಲಿ:ಕೊರೊನಾ ರುದ್ರನರ್ತನಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಡೆಡ್ಲಿ ವೈರಸ್‌ ನಿರ್ಮೂಲನೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈ ಭೀತಿಯಿಂದ ನರಳುವಂತಹ ಸ್ಥಿತಿ ಇದೀಗ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರವೇ ತಿಳಿಸಿರುವ ಪ್ರಕಾರ, ದೇಶದಲ್ಲಿ 90 ವೈದ್ಯರು, ಅನೇಕ ನರ್ಸ್​ಗಳು ಈ ಮಹಾಮಾರಿಯಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಈಗಾಗಲೇ ಮೂವರು ವೈದ್ಯರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಇಬ್ಬರು ಸರ್ಕಾರಿ, ಇಬ್ಬರು ರೈಲ್ವೇ ಹಾಗೂ ನಾಲ್ವರು ಖಾಸಗಿ ಆಸ್ಪತ್ರೆ ವೈದ್ಯರು ಕೊರೊನಾದಿಂದ ಬಳಲುತ್ತಿದ್ದು, ಐವರು ನರ್ಸ್​ಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ.

ಕೊರೊನಾದಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಪುಣೆಯಲ್ಲಿನ ರುಬಿ ಹಾಲ್​ ಕ್ಲಿನಿಕ್​​ನಲ್ಲಿ ಓರ್ವ ನರ್ಸ್​ಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದ 30 ಸಹ ನರ್ಸ್‌ ಸಿಬ್ಬಂದಿ ಕ್ವಾರಂಟೈನ್​​ನಲ್ಲಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ 8,500 ಗಡಿ ದಾಟಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ABOUT THE AUTHOR

...view details