ಕರ್ನಾಟಕ

karnataka

ETV Bharat / bharat

ಬಿಜೆಪಿ ಬಲಗೊಳಿಸಿದ್ರು ಅಡ್ವಾಣಿ: ಮೋದಿ ಗುಣಗಾನ - ಬಿಜೆಪಿ

ಎಲ್​.ಕೆ. ಅಡ್ವಾಣಿ ಬ್ಲಾಗ್ ಬರಹವನ್ನು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಕೊಂಡಾಡಿದ್ದಾರೆ.

ಅಡ್ವಾಣಿ ಕೊಂಡಾಡಿದ ಮೋದಿ

By

Published : Apr 4, 2019, 11:56 PM IST

ನವದೆಹಲಿ:ಬಿಜೆಪಿ ತತ್ವಾದರ್ಶಗಳ ಬಗ್ಗೆ ಬ್ಲಾಗ್​ನಲ್ಲಿ ಬರೆದುಕೊಂಡ ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಲೋಕಸಭಾ ಚುನಾವಣೆಯಿಂದ ಹೊರಗುಳಿದ ನಂತರ ಮೊದಲ ಬಾರಿಗೆ ಬ್ಲಾಗ್​ನಲ್ಲಿ ಬರೆದುಕೊಂಡಿದ್ದ ಅಡ್ವಾಣಿ, ಬಿಜೆಪಿ ಸಂಸ್ಥಾಪನೆ ದಿನಾಚರಣೆ ಕುರಿತು ಮಾತನಾಡಿದ್ದರು. ತಮ್ಮ ಬರಹದಲ್ಲಿ ಬಿಜೆಪಿಯ ತತ್ವಾದರ್ಶಗಳನ್ನು ಉಲ್ಲೇಖಿಸಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಅಡ್ವಾಣಿ ಅವರು ಬಿಜೆಪಿಯ ನೈಜ ಆದರ್ಶವನ್ನು ಸಮಗ್ರವಾಗಿ ಹೇಳಿದ್ದಾರೆ. ದೇಶ ಮೊದಲು, ಪಕ್ಷ ನಂತರ, ಸ್ವಂತದ್ದು ಕೊನೆಗೆ ಎಂಬ ದಿವ್ಯ ಮಂತ್ರವನ್ನು ನಮಗೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಅಂತೆಯೇ, ಮೇರು ವ್ಯಕ್ತಿತ್ವದ ಎಲ್​.ಕೆ. ಅಡ್ವಾಣಿ ಅವರು ಬಿಜೆಪಿಯನ್ನು ಬಲಪಡಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಬಿಜೆಪಿ ಭೀಷ್ಮ ಎಂದು ಕರೆಯಲ್ಪಡುವ ಅಡ್ವಾಣಿ ಅವರನ್ನು ಹಿಂದೆ ಸರಿಸಿ, ಮೋದಿ ಮುಂದೆ ಬರುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಾರಿಯ ಚುನಾವಣೆಗೆ ಅವರಿಗೆ ಟಿಕೆಟ್​ ನೀಡದೆ, ಬಿಜೆಪಿ ಹಾಗೂ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಹರಿಹಾಯುತ್ತಿದ್ದಾರೆ. ಈ ಮಧ್ಯೆ ಅಡ್ವಾಣಿ ಬ್ಲಾಗ್​ ಬರಹ ಹಾಗೂ ಆನಂತರ ಪ್ರಧಾನಿ ಮೋದಿ ಪ್ರತಿಕ್ರಿಯೆ ಸಾಕಷ್ಟು ಸುದ್ದಿಯಾಗುತ್ತಿದೆ.


ABOUT THE AUTHOR

...view details