ಭದ್ರಾಕ್ (ಒಡಿಶಾ): ಸ್ಥಳೀಯವಾಗಿ ಟೆಲಿಯಾ ಎಂದು ಕರೆಯಲ್ಪಡುವ ಘೋಲ್ ಎಂಬ ಬೃಹತ್ ಅಪರೂಪದ ಮೀನು ಹಿಡಿದ ಒಡಿಶಾದ ಭದ್ರಾಕ್ ಜಿಲ್ಲೆಯ ಧಮ್ರಾದ ಚಂದನಿಪಾಲ್ ಪ್ರದೇಶದ ಮೀನುಗಾರ, ಪಶ್ಚಿಮ ಬಂಗಾಳದ ವ್ಯಾಪಾರಿಗೆ 1.43 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಮೂಲಗಳ ಪ್ರಕಾರ, ಮೀನುಗಾರ ಎರಡು ದಿನಗಳ ಹಿಂದೆ ಧಮ್ರಾ ಬಂದರಿನಿಂದ ಆಳ ಸಮುದ್ರಕ್ಕೆ ಹೋಗಿ ಅಪರೂಪದ ಮೀನು ಹಿಡಿದು ಮರಳಿದ್ದ.
ಮೀನಿನ ತೂಕ ಸುಮಾರು 22 ಕೆಜಿ ಇದ್ದು, ಪ್ರತೀ ಕೆಜಿ 6,500 ರೂ.ಗೆ ಮಾರಾಟವಾಗಲಿದೆ. ಅಪರೂಪದ ಮತ್ಸ್ಯ ನೋಡಲು ಮತ್ತು ಅದರ ಖರೀದಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಮೀನುಗಳು ಔಷಧೀಯ ಗುಣ ಹೊಂದಿದ್ದು, ವಿವಿಧ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಘೋಲ್ ಮೀನು ಸಾಮಾನ್ಯವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದ ಕರಾವಳಿಯ ಭಾರತೀಯ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಮೀನುಗಳನ್ನು ಇಂಡೋನೇಷ್ಯಾ, ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಔಷಧೀಯ ಬಳಕೆಗಾಗಿ ಅಪಾರ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.