ಜಹಾನಾಬಾದ್ (ಉತ್ತರಪ್ರದೇಶ): ಬಿಜೆಪಿಗರು ಆಯ್ಕೆಯ ದೇಶಭಕ್ತರು. ಅವರು ನಿಜವಾದ ದೇಶಭಕ್ತರೇ ಆಗಿದ್ದರೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೂ ಗೌರವ ಕೊಡಬೇಕು ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದರು.
ಜಹಾನಾಬಾದ್ನಲ್ಲಿ ಪ್ರಚಾರ ನಡೆಸಿ, ಮಾತನಾಡಿದ ಪ್ರಿಯಾಂಕಾ ಬೃಹತ್ ಘೋಷಣೆಗಳನ್ನು ಮಾಡುವಾಗ ಅದರ ಜತೆಗ ಬಿಜೆಪಿಗರು ದೇಶಭಕ್ತಿಯನ್ನು ತಳುಕು ಹಾಕುತ್ತಾರೆ. ದೇಶದಲ್ಲಿ ಬೇರಾರೂ ದೇಶಭಕ್ತರು ಇಲ್ಲವೇ? ಪ್ರತಿಯೊಬ್ಬರೂ ದೇಶಭಕ್ತರು ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.
ಬಿಜೆಪಿ ದೇಶಭಕ್ತಿ ಕುಟುಕಿದ ಪ್ರಿಯಾಂಕಾ ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿಗರು ಹಿಂದೂ, ಮುಸ್ಲಿಂ ಹಾಗೂ ಪ್ರತಿಪಕ್ಷಗಳ ಹುತಾತ್ಮರಿಗೂ ಗೌರವ ನೀಡಬೇಕು. ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಗೌರವ ನೀಡುವುದು ಸರಿಯಲ್ಲ ಎಂದರು.
ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅದನ್ನೇ ದೇಶಭಕ್ತಿ ಅಂತಾ ಬಿಂಬಿಸಿದ್ದರು. ಈ ಮೂಲಕ ಕಪ್ಪುಹಣವನ್ನು ವಾಪಸ್ ಭಾರತಕ್ಕೆ ತರುತ್ತೇವೆ ಎಂದರು. ಆದರೆ ನಯಾಪೈಸೆಯೂ ಭಾರತಕ್ಕೆ ವಾಪಸ್ ಬರಲಿಲ್ಲ ಎಂದು ಪ್ರಿಯಾಂಕಾ ಛೇಡಿಸಿದರು.
ಚುನಾವಣೆ ಬಂದಾಗೆಲೆಲ್ಲಾ ಬಿಜೆಪಿಗರು ದೇಶಭಕ್ತಿ ಎಂದು ಕೂಗಾಡ್ತಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ರೈತರಿಗೆ, ನಿರುದ್ಯೋಗಿಗಳಿಗೆ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.