ಕರ್ನಾಟಕ

karnataka

ETV Bharat / bharat

ನ.18ಕ್ಕೆ ಹೊಸ ಸಿಜೆಐ ಪ್ರಮಾಣ: ಬೊಬ್ಡೆ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ನ್ಯಾ.ಬೊಬ್ಡೆಯವರು ಏಪ್ರಿಲ್​​ 23, 2021ರವರೆಗೆ ಅಧಿಕಾರದಲ್ಲಿರಲಿದ್ದಾರೆ.

ಬೊಬ್ಡೆ

By

Published : Oct 29, 2019, 11:47 AM IST

ನವದೆಹಲಿ: ನವೆಂಬರ್​ 17ಕ್ಕೆ ಸುಪ್ರೀಂಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯ್​​ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಶರದ್​ ಅರವಿಂದ್ ಬೊಬ್ಡೆ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿದ್ದಾರೆ. ಈ ನೇಮಕಾತಿಗೆ ಇಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಇನ್ನು ಸುಪ್ರೀಂಕೋರ್ಟ್​​ನ ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ನವೆಂಬರ್​ 18ರಂದು ಎಸ್.ಎ ಬೊಬ್ಡೆ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ನ್ಯಾ.ಬೊಬ್ಡೆಯವರು ಏಪ್ರಿಲ್​​ 23, 2021ರವರೆಗೆ ಅಧಿಕಾರದಲ್ಲಿರಲಿದ್ದಾರೆ.

ಹೊಸ ಸಿಜೆಐ ಪದಗ್ರಹಣ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಮೂರ್ತಿಗಳು, ಪ್ರಧಾನಿ, ಉಪರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸುಪ್ರೀಂಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೊಯಿ

ಹಾಲಿ ಸಿಜೆಐ ರಂಜನ್​ ಗೊಗೊಯ್​​, ಮುಂದಿನ ಸಿಜೆಐ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ವಯಸ್ಸಿನ ಆಧಾರದಲ್ಲಿ ಬೊಬ್ಡೆ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿ, ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿತ್ತು. ಇದಕ್ಕೆ ಸದ್ಯ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ಬೋಬ್ಡೆ ಅಧಿಕಾರ ಸನ್ನಿಹಿತವಾಗಿದೆ.

ABOUT THE AUTHOR

...view details